ಕರ್ನಾಟಕ

karnataka

ETV Bharat / briefs

ಅನಧಿಕೃತ ಉಪ ಖನಿಜ ಗಣಿಗಾರಿಕೆ ಹಾಗೂ ಸಾಗಾಣಿಕೆ ನಿಯಂತ್ರಿಸಲು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆ - DC sindhu b rupesh

ನೇತ್ರಾವತಿ, ಫಲ್ಗುಣಿ ಹಾಗೂ ಶಾಂಭವಿ ನದಿಗಳ ದಂಡೆಗಳ ಸರ್ಕಾರಿ ಜಮೀನಿನಲ್ಲಿ ಇರಿಸಿರುವ ದೋಣಿಗಳನ್ನು ಸಂಬಂಧಪಟ್ಟ ಮಾಲಿಕರು ಇಂದಿನಿಂದ 3 ದಿನಗಳಲ್ಲಿ ಈ ದೋಣಿಗಳನ್ನು ಅಲ್ಲಿಂದ ತೆರವುಗೊಳಿಸುವಂತೆ ಡಿಸಿ ಸಿಂಧೂ ಬಿ.ರೂಪೇಶ್ ಅವರು ಎಚ್ಚರಿಕೆ ನೀಡಿದ್ದಾರೆ.

Dakshinakannada District Task Force Committee Meeting
Dakshinakannada District Task Force Committee Meeting

By

Published : Jun 19, 2020, 11:19 PM IST

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನಧಿಕೃತ ಉಪ ಖನಿಜ ಗಣಿಗಾರಿಕೆ ಹಾಗೂ ಸಾಗಾಣಿಕೆಯನ್ನು ನಿಯಂತ್ರಿಸುವ ಕುರಿತು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಸಭೆ ಇಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜೂ.18 ರಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಎರಡು ತಂಡಗಳು ಮೂಡಬಿದಿರೆ ತಾಲೂಕಿನ ನಿಡ್ಡೋಡಿ, ನೀರುಡೆ ಪ್ರದೇಶಗಳಲ್ಲಿ ಮತ್ತು ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದಲ್ಲಿ ಅನಧಿಕೃತ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಕಲ್ಲು ಗಣಿ ಪ್ರದೇಶಗಳಿಗೆ ದಾಳಿ ನಡೆಸಿ ಕಾನೂನು ಕ್ರಮ ಕೈಗೊಂಡಿರುವ ಬಗ್ಗೆ ಚರ್ಚೆ ನಡೆಯಿತು.‌

ಅಲ್ಲದೆ ಮಂಗಳೂರು ತಹಶೀಲ್ದಾರ್ ರವರ ನೇತೃತ್ವದ ತಂಡವು ಜೂ.17 ರಂದು ಅಡ್ಯಾರ್, ಶಾಂಭವಿ ನದಿ, ಮಳವೂರು, ಆದ್ಯಪಾಡಿ ಡ್ಯಾಂ ಪ್ರದೇಶಗಳಲ್ಲಿ ತೀವ್ರ ಕಾರ್ಯಾಚರಣೆ ನಡೆಸಿದ್ದು, ಆ ಸಮಯದಲ್ಲಿ ನದಿಯ ದಂಡೆಗಳಲ್ಲಿ ದೋಣಿಗಳನ್ನು ಇರಿಸಿರುವುದು ಕಂಡು ಬಂದಿರುತ್ತದೆ ಎಂದು ಸಭೆಯಲ್ಲಿ ಮಾಹಿತಿ ನೀಡಿದ್ದರು.

ಆದ್ದರಿಂದ ನೇತ್ರಾವತಿ, ಫಲ್ಗುಣಿ ಹಾಗೂ ಶಾಂಭವಿ ನದಿಗಳ ದಂಡೆಗಳ ಸರ್ಕಾರಿ ಜಮೀನಿನಲ್ಲಿ ಇರಿಸಿರುವ ದೋಣಿಗಳನ್ನು ಅನಧಿಕೃತ ಮರಳುಗಾರಿಕೆಗೆ ಬಳಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ದೋಣಿಗಳಿಗೆ ಸಂಬಂಧಪಟ್ಟ ಮಾಲಿಕರು ಇಂದಿನಿಂದ
3 ದಿನಗಳಲ್ಲಿ ಈ ದೋಣಿಗಳನ್ನು ಅಲ್ಲಿಂದ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಯಾವುದೇ ಮುನ್ನೆಚ್ಚರಿಕೆ ನೀಡದೆ ಆ ದೋಣಿಗಳನ್ನು ಸರ್ಕಾರ ವಶಪಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಆದೇಶಿಸಿದರು.

ಅಲ್ಲದೆ ಅನಧಿಕೃತ ಮರಳುಗಾರಿಕೆ ಹಾಗೂ ಸಾಗಾಣಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ತಂಡಗಳು ಕೈಗೊಂಡ ಕ್ರಮಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಲಾಯಿತು.

ABOUT THE AUTHOR

...view details