ಕರ್ನಾಟಕ

karnataka

ETV Bharat / briefs

'ಫಣಿ' ಪುರಿ ಜಗನ್ನಾಥನನ್ನೂ ಬಿಡಲಿಲ್ಲ... ಹೇಗಾಗಿದೆ ನೀವೇ ನೋಡಿ...! - ಒಡಿಶಾ

ದೇಶದ ಭಕ್ತರು ಆರಾಧಿಸುವ, ನಮ್ಮನ್ನೆಲ್ಲ ಕಾಪಾಡುತ್ತಾನೆ ಎಂದೇ ನಂಬಲಾಗಿರುವ ಪುರಿ ಜಗನ್ನಾಥ ದೇವಾಲಯವನ್ನ ಚಂಡಮಾರುತ ಬಿಟ್ಟಿಲ್ಲ. ದೇವಾಲಯದ ದ್ವಾರಪಾಲಕ, ಸಿಂಗದ್ವಾರ, ಸ್ರೀಮಂದಿರ ಭಾರಿ ಮಳೆ ಗಾಳಿಗೆ ಹಾನಿಗೊಳಗಾಗಿವೆ. ದೇವಸ್ಥಾನದ ದಕ್ಷಿಣ ಹಾಗೂ ಪಶ್ಚಿಮ ಭಾಗಗಳು ಚಂಡಮಾರುತದಿಂದ ನೆಲಕಚ್ಚಿವೆ.

ಪುರಿ

By

Published : May 6, 2019, 7:32 PM IST

ಪುರಿ(ಒಡಿಶಾ):ಫಣಿ ಚಂಡಮಾರುತದ ರಕ್ಕಸ ಗಾಳಿಗೆ ಸಿಲುಕಿ ಒಡಿಶಾ ವಿಲ ವಿಲ ಒದ್ದಾಡಿದೆ. ಚಂಡಮಾರುತದ ಅಬ್ಬರಕ್ಕೆ ವಿದ್ಯುತ್​ ಕಂಬಗಳು,ರಸ್ತೆಗಳು,ಟೆಲಿಫೋನ್​​, ಮೊಬೈಲ್​ ಸಂಪರ್ಕ ಹೀಗೆ ಪ್ರತಿಯೊಂದು ಸೇವೆಯನ್ನು ನೆಲಕಚ್ಚುವಂತೆ ಮಾಡಿದೆ.

ಅಷ್ಟೇ ಏಕೆ, ದೇಶದ ಭಕ್ತರು ಆರಾಧಿಸುವ, ನಮ್ಮನ್ನೆಲ್ಲ ಕಾಪಾಡುತ್ತಾನೆ ಎಂದೇ ನಂಬಲಾಗಿರುವ ಪುರಿ ಜಗನ್ನಾಥ ದೇವಾಲಯವನ್ನೂ ಚಂಡಮಾರುತ ಬಿಟ್ಟಿಲ್ಲ. ದೇವಾಲಯದ ದ್ವಾರಪಾಲಕ, ಸಿಂಗದ್ವಾರ, ಸ್ರೀಮಂದಿರ ಭಾರಿ ಮಳೆ ಗಾಳಿಗೆ ಹಾನಿಗೊಳಗಾಗಿವೆ. ದೇವಸ್ಥಾನದ ದಕ್ಷಿಣ ಹಾಗೂ ಪಶ್ಚಿಮ ಭಾಗಗಳು ಚಂಡಮಾರುತದಿಂದ ಹಾನಿಗೊಳಗಾಗಿವೆ.

ಪುರಿ ಜಗನ್ನಾಥ ದೇವಾಲಯ

12ನೇ ಶತಮಾನದ ಸಖಿಗೋಪಾಲ ಮತ್ತು ಬರಹ ಮಂದಿರದ ಆವರಣಗಳು ಹೆಚ್ಚಿನ ಹಾನಿಗೊಳಗಾಗಿವೆ. ಭಾರತೀಯ ಪುರಾತತ್ವ ಇಲಾಖೆ ಅಳವಡಿಸಿದ್ದ ಕಂಬಗಳು ಪ್ರಬಲ ಗಾಳಿಯಿಂದಾಗಿ ನೆಲಕ್ಕುರುಳಿವೆ. ಇನ್ನು ಭಾರಿ ಹಳೆ ಮರ ಎಂಬ ಪ್ರತೀತಿ ಹೊಂದಿದ್ದ ಅತ್ಯಂತ ಹಳೆಯ ಆಲದ ಮರ ಭಾರಿ ಗಾಳಿಗೆ ಧರೆಗುರುಳಿದೆ.

ABOUT THE AUTHOR

...view details