ಕರ್ನಾಟಕ

karnataka

ETV Bharat / briefs

ಶ್ರೀಲಂಕಾದಲ್ಲಿ ಬಾಂಬ್ ದಾಳಿ ಹಿನ್ನೆಲೆಯಲ್ಲಿ ಬೆಂಗಳೂರಿನಾದ್ಯಂತ ಹೈ ಅಲರ್ಟ್... ಸ್ಟೇಡಿಯಂ ಸುತ್ತಾ ತಪಾಸಣೆ - ರಾಯಲ್ ಚಾಲೆಂಜರ್ಸ್ ಬೆಂಗಳೂರು

ಶ್ರೀಲಂಕಾದಲ್ಲಿ ಬಾಂಬ್​ ದಾಳಿ ನಡೆದ ಹಿನ್ನಲೆಯಲ್ಲಿ ಇಂದು ಆರ್​ಸಿಬಿ-ಚೆನ್ನೈ ಪಂದ್ಯಕ್ಕೂ ಮುನ್ನ ಚಿನ್ನಸ್ವಾಮಿ ಸ್ಟೇಡಿಯಂನ ಸುತ್ತ ಮುತ್ತ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ.

rcb

By

Published : Apr 21, 2019, 6:41 PM IST

ಬೆಂಗಳೂರು: ಶ್ರೀಲಂಕಾದಲ್ಲಿ ಬಾಂಬ್​ ದಾಳಿ ನಡೆದ ಹಿನ್ನಲೆಯಲ್ಲಿ ಇಂದು ಆರ್​ಸಿಬಿ-ಚೆನ್ನೈ ಪಂದ್ಯಕ್ಕೂ ಮುನ್ನ ಚಿನ್ನಸ್ವಾಮಿ ಸ್ಟೇಡಿಯಂನ ಸುತ್ತ ಮುತ್ತ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ.

ಚಿನ್ನಸ್ವಾಮಿ ಸ್ಟೇಡಿಯಂನ ಸುತ್ತಮುತ್ತಾ ಇರುವಂತಹ ಪ್ರತಿಯೊಂದು ಕಸದ ಬುಟ್ಟಿ, ಚರಂಡಿಗಳಲ್ಲಿ ಕೈಹಾಕಿ ಸ್ವತಃ ಪರಿಶೀಲನೆ ಮಾಡುತ್ತಿರುವ ವಿ.ಕೆ ಸಿಂಗ್, ಸ್ಟೇಡಿಯಂ ಬಳಿ ಟಿ ಶರ್ಟ್ ವ್ಯಾಪಾರ ಮಾಡುತ್ತಿದ್ದಂತ ಪ್ರತಿಯೊಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ, ಸ್ವತಃ ಸ್ಟೇಡಿಯಂನವರು ತೆರೆದಿದ್ದ ಲಗೇಜ್ ಇಡುವಂತ ಬ್ಯಾಗೇಜ್ ಕೌಂಟರ್​ಗಳನ್ನು ತೆರವುಗೊಳಿಸಿದ್ದಾರೆ.

ಆರ್​ಸಿಬಿ-ಚೆನ್ನೈ ಪಂದ್ಯಕ್ಕೂ ಮುನ್ನ ಚಿನ್ನಸ್ವಾಮಿ ಸ್ಟೇಡಿಯಂನ ಸುತ್ತ ಮುತ್ತ ಪೊಲೀಸರಿಂದ ತಪಾಷಣೆ
ಪೊಲೀಸ್ ಕಮಿಷನರ್ ಟಿ ಸುನೀಲ್ ಕುಮಾರ್ ಮತ್ತು ಪಶ್ಚಿಮ ವಿಭಾಗದ ಅಡಿಷನಲ್ ಸಿಪಿ ವಿಕೆ ಸಿಂಗ್ ಮತ್ತು ಟ್ರಾಫಿಕ್ ವಿಭಾಗದ ಕಮಿಷನರ್ ಹರಿಶೇಖರನ್ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬೀಡುಬಿಟ್ಟಿದ್ದಾರೆ.ಇಂದು ಸಂಜೆ 8ಗಂಟೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ, ಸ್ಟೇಡಿಯಂ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಹಿನ್ನೆಲೆಯಲ್ಲಿ ಪಾರ್ಕಿಂಗ್ ಸಹಾ ನಿಷೇಧಿಸಲಾಗಿದೆಸ್ಟೇಡಿಯಂ ಸುತ್ತ ಮುತ್ತ ಎಲ್ಲೂ ವಾಹನಗಳು ನಿಲ್ಲಿಸದಂತ್ತೆ ಸೂಚಿಸಲಾಗಿದೆ.

ABOUT THE AUTHOR

...view details