ಸೌತಮ್ಟನ್: ವಿಶ್ವದೆಲ್ಲೆಡೆ ತನ್ನ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಯುನಿವರ್ಸಲ್ ಬಾಸ್ ಎಂದೇ ಹೆಸರಾಗಿರುವ ಕ್ರಿಸ್ಗೇಲ್ ಮೈದಾನದಲ್ಲಿದ್ದರೆ ಬೌಂಡರಿ, ಸಿಕ್ಸರ್ ಮೂಲಕವಲ್ಲದೇ ತಮ್ಮ ಇತರ ಚಟುವಟಿಕೆಯಿಂದ ನೆರೆದಿರುವ ಸಾವಿರಾರು ಅಭಿಮಾನಿಗಳನ್ನು ರಂಜಿಸಿದ್ದಾರೆ.
ನಿನ್ನೆ ಆತಿಥೇಯ ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ 8 ವಿಕೆಟ್ಗಳಿಂದ ಸೋಲೊಪ್ಪಿಕೊಂಡಿತ್ತು. ಆದರೆ, ಇಂಗ್ಲೆಂಡ್ ಪಂದ್ಯ ಗೆದ್ದಿದ್ದಕ್ಕಿಂತ ಹೆಚ್ಚಿನ ಮನರಂಜನೆ ನೀಡಿದ್ದು ವಿಂಡೀಸ್ನ ಸಿಕ್ಸರ್ ಕಿಂಗ್ ಕ್ರಿಸ್ ಗೇಲ್.
ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ ಪರ ಗೇಲ್ 36 ರನ್ಗಳಿಸಿದ ಗೇಲ್ ಎರಡನೇ ಇನ್ನಿಂಗ್ಸ್ ವೇಳೆ ಬೌಲಿಂಗ್ ಸಹಾ ಮಾಡಿ ಸೈ ಎನಿಸಿಕೊಂಡರು. ಬೌಲಿಂಗ್ ಬರುವ ವೇಳೆ ಮೈದಾನದಲ್ಲಿ ಡ್ಯಾನ್ಸ್ ಮಾಡುವ ಮೂಲಕ ವಾರ್ಮ್ ಅಪ್ ಮಾಡಿ ಅಭಿಮಾನಿಗಳನ್ನು ರಂಜಿಸಿದರು.
ಬೌಲಿಂಗ್ ಮಾಡುತ್ತಿರುವ ಕ್ರಿಸ್ ಗೇಲ್ 40 ವರ್ಷದ ಗೇಲ್ ತಮ್ಮ ಕೊನೆಯ ವಿಶ್ವಕಪ್ ಆಡುತ್ತಿದ್ದು, ತಮ್ಮ ಮೊದಲ ಓವರ್ನಲ್ಲೇ ಕೇವಲ ಒಂದು ರನ್ ನೀಡಿ ಗಮನ ಸೆಳೆದರು. ಈ ಓವರ್ ವೇಳೆ ಗೇಲ್ ಎಸೆದ ಒಂದು ಬಾಲ್ ರೂಟ್ ಹೊಟ್ಟೆಗೆ ತಾಕಿ ಕೆಳಗೆ ಕುಳಿತು. ಈ ವೇಳೆ ಕ್ರಿಸ್ ಗೇಲ್ ಕೊಟ್ಟ ಸ್ಪಂದನೆಗೆ ಸ್ವತಃ ರೂಟ್ ಮೊಗದಲ್ಲಿ ನಗು ಬರುವಂತೆ ಮಾಡಿತು.
ಒಟ್ಟಿನಲ್ಲಿ ಸೋಲು - ಗೆಲುವನ್ನು ಮನದಲ್ಲಿಟ್ಟುಕೊಳ್ಳದ ಗೇಲ್ ಮೈದಾನದಲ್ಲಿ ತಮ್ಮ ವಯಸ್ಸು ಲೆಕ್ಕಿಸದೇ ಲವಲವಿಕೆಯಿಂದ ಓಡಾಡಿಕೊಂಡಿರುವುದನ್ನು ಕಂಡು ಎದುರಾಳಿ ಅಭಿಮಾನಿಗಳು ಕೂಡ ಗೇಲ್ ಹೆಸರನ್ನು ಚೀರುತ್ತಿದ್ದಾರೆ. ಸಿಕ್ಸರ್-ಬೌಂಡರಿ ಮೂಲಕ ಯೂನಿವರ್ಸಲ್ ಬಾಸ್ ಎಂಬ ಹೆಸರು ಪಡೆದಿರುವ ಗೇಲ್, ವಿಶ್ವಕಪ್ನಲ್ಲಿ ಗ್ಲೋಬಲ್ ಎಂಟೈಟನರ್ ಆಗಿ ಬದಲಾಗುತ್ತಿದ್ದಾರೆ.