ಲಂಡನ್ :ಮೊನ್ನೆ ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಮೈದಾನಕ್ಕೆ ಬಂದ ಸ್ಮಿತ್ ಹಾಗೂ ವಾರ್ನರ್ರನ್ನು ಚೀಟರ್ಸ್ ಚೀಟರ್ಸ್ ಎಂದು ಕೂಗಿ ಅವರಿಗೆ ಅವಮಾನ ಮಾಡಿದ್ದಾರೆ, ಅವರಿಗೆ ದಯೆ ಎನ್ನುವುದೇ ತಿಳಿದಿಲ್ಲ ಎಂದು ನಥಾನ್ ಲಿಯಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಲ್ ಟ್ಯಾಂಪರಿಂಗ್ ಘಟನೆಯಿಂದ ಈಗಾಗಲೆ ಒಂದು ವರ್ಷ ಕ್ರಿಕೆಟ್ನಿಂದ ದೂರಿವಿದ್ದು ನೊಂದಿರುವ ಸ್ಟೀವನ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ರನ್ನು ಇಂಗ್ಲೆಂಡ್ ಅಭಿಮಾನಿಗಳು ನಿರ್ಧಯೆಯಿಂದ ಕಾಣುತ್ತಿದ್ದಾರೆ. ಇಡೀ ಕ್ರೀಡಾಂಗಣದಲ್ಲಿ ಸೇರಿದ್ದ ಅಷ್ಟೂಜನ ಚೀಟರ್.. ಚೀಟರ್ ಎಂದು ಅಣಕಿಸಿದ್ದಾರೆ, ಇದರಿಂದಲೇ ತಿಳಿಯುತ್ತದೆ ಅವರೆಂತಹ ಮನಸ್ಥಿತಿಯುಳ್ಳವರೆಂದು ಘಟನೆ ಕುರಿತು ಲಿಯಾನ್ ಬೇಸರ ವ್ಯಕ್ತಪಡಿಸಿದ್ದಾರೆ.