ಲಂಡನ್:ಭಾನುವಾರ ನಡೆದ ಬಾಂಗ್ಲಾ ಮತ್ತು ದ.ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಬೌಂಡರಿ ಆಚೆ ನಿಂತಿದ್ದ ಪೋಟೋಗ್ರಾಫರ್ ಬ್ಯಾಟ್ಸ್ಮನ್ ಸಿಕ್ಸ್ಗಟ್ಟುವ ಭಂಗಿಯನ್ನು ತನ್ನ ಕ್ಯಾಮರಾದಲ್ಲಿ ಸೆರೆಹಿಡಿಯುವುದರ ಜೊತೆಗೆ ಬಾಲನ್ನು ಒಂದೇ ಕೈಯಲ್ಲಿಡಿದು ಸ್ಟಾರ್ ಆಗಿದ್ದಾನೆ.
ದ.ಆಫ್ರಿಕಾದ ನಾಯಕ ಫಾಫ್ ಡು ಪ್ಲೆಸಿಸ್, ಮೊಸದಿಕ್ ಹುಸೇನ್ ಓವರ್ನಲ್ಲಿ ಸಿಕ್ಸರ್ ಮೂಲಕ ಅರ್ಧಶತಕ ಪೂರೈಸಿದ್ದರು. ಈ ವೇಳೆ ಪೆವಿಲಿಯನ್ ಬಳಿ ನಿಂತಿದ್ದ ಇಯಾನ್ ಕಿಂಗ್ಟನ್ ಎಂಬ ಫೋಟೋಗ್ರಾಫರ್ ಪ್ಲೆಸಿಸ್ ಹೊಡೆದ ಬಾಲನ್ನು ತಮ್ಮ ಬಲಗೈವೊಂದರಲ್ಲೇ ಹಿಡಿದು ಎಲ್ಲರ ಗಮನ ಸೆಳೆದಿದ್ದಾರೆ. ಈ ಕ್ಯಾಚ್ ಪಡೆಯುವ ಸಂದರ್ಭದಲ್ಲಿ ಎಡಗೈಯಲ್ಲಿ ದೊಡ್ಡ ಕ್ಯಾಮರಾ ಹಿಡಿದುಕೊಂಡಿದ್ದು ವಿಶೇಷವಾಗಿತ್ತು.