ಲಂಡನ್: 12 ರಿಂದ 15 ವರ್ಷ ವಯಸ್ಸಿನ ಮಕ್ಕಳಿಗೆ ಫಿಜರ್ /ಬಯೋಟೆಕ್ ಅಭಿವೃದ್ಧಿಪಡಿಸಿದ ಕೋವಿಡ್ ಲಸಿಕೆಯನ್ನು ಅನುಮೋದಿಸಿದೆ ಎಂದು ಯುನೈಟೆಡ್ ಕಿಂಗ್‌ಡಂ ತಿಳಿಸಿದೆ. ಈ ಹಿಂದೆ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟ ಕೂಡ ಇದೇ ರೀತಿಯ ಅನುಮೋದನೆ ನೀಡಿತ್ತು.
12 -15 ವರ್ಷ ವಯಸ್ಸಿನ ಮಕ್ಕಳ ಲಸಿಕೆಗೆ ಅನುಮೋದನೆ ನೀಡಿದ ಬ್ರಿಟನ್ ಸರ್ಕಾರ - UK approves Pfizer, BioNTech Covid-19 vaccine for 12 to 15-year-old kids
ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ನಂತರ, ಈಗ ಯುಕೆ 12-15 ವರ್ಷ ವಯಸ್ಸಿನ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲು ಅನುಮತಿಸಿದೆ.
ಈ ವಯಸ್ಸಿನ ಗುಂಪಿನಲ್ಲಿ ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಕಟ್ಟುನಿಟ್ಟಾಗಿ ಪರಿಶೀಲಿಸಿದ ನಂತರ ಬ್ರಿಟನ್‌ನ ಔಷಧ ಮತ್ತು ಆರೋಗ್ಯ ಉತ್ಪನ್ನಗಳ ನಿಯಂತ್ರಣ ಸಂಸ್ಥೆ ಇಂದು ಈ ನಿರ್ಧಾರವನ್ನು ಪ್ರಕಟ ಮಾಡಿದೆ.
ಈ ಸಂಬಂಧ ಮಾತನಾಡಿರುವ ಎಂಎಚ್‌ಆರ್‌ಎ ಮುಖ್ಯ ಕಾರ್ಯನಿರ್ವಾಹಕ ಡಾ. ಜೂನ್ ರೈನ್ , 12 ರಿಂದ 15 ವರ್ಷ ವಯಸ್ಸಿನ ಮಕ್ಕಳಲ್ಲಿ ಕ್ಲಿನಿಕಲ್ ಟ್ರಯಲ್ ಡೇಟಾವನ್ನು ಎಚ್ಚರಿಕೆಯಿಂದ ಪರಿಶೀಲಿಸಿದ್ದೇವೆ ಮತ್ತು ಫಿಜರ್ / ಬಯೋಟೆಕ್ ಕೋವಿಡ್ -19 ಲಸಿಕೆ ಈ ವಯೋಮಾನದವರಲ್ಲಿ ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ತೀರ್ಮಾನಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.