ಕರ್ನಾಟಕ

karnataka

ETV Bharat / briefs

ಸ್ಪುಟ್ನಿಕ್​ V ಖರೀದಿಗೆ ಆಸಕ್ತಿ.. ಎರಡೇ ದಿನದಲ್ಲಿ ಸಲ್ಲಿಕೆಯಾಗಲಿದೆ ಕೋವಿಡ್ ಲಸಿಕೆ ಗ್ಲೋಬಲ್​ ಟೆಂಡರ್ ವರದಿ - global tender called by state government

ದೊಡ್ಡ ಮಟ್ಟದಲ್ಲಿ ಲಸಿಕೆ ಕಾರ್ಯಕ್ರಮ ನೀಡಲು ಸರ್ಕಾರ ಗ್ಲೋಬಲ್ ಟೆಂಡರ್ ಕರೆದಿದ್ದು, ಸುಮಾರು ಆರು ಕೋಟಿ ಲಸಿಕೆ ಖರೀದಿಸಲು ಮುಂದಾಗಿದೆ. ಹಂತ ಹಂತವಾಗಿ ಸರ್ಕಾರ ಜನರಿಗೆ ಲಸಿಕೆ ನೀಡಲು ಬೇಕಾದ ಎಲ್ಲಾ ಯೋಜನೆಗಳನ್ನ ರೂಪಿಸುತ್ತಿದ್ದು, ಗ್ಲೋಬಲ್ ಟೆಂಡರ್​ನಲ್ಲಿ ಖರೀದಿ ಆಗುವ ಬಹುತೇಕ ಪಾಲು ಬೆಂಗಳೂರಿಗೆ ಸೇರಲಿದೆ.

Covid Vaccine Global Tender
Covid Vaccine Global Tender

By

Published : May 26, 2021, 6:01 PM IST

ಬೆಂಗಳೂರು : ರಾಜ್ಯ ಸರ್ಕಾರ ದೊಡ್ಡ ಮಟ್ಟದಲ್ಲಿ ಕೋವಿಡ್ ಲಸಿಕೆ ಕಾರ್ಯಕ್ರಮಕ್ಕೆ ಗ್ಲೋಬಲ್ ಟೆಂಡರ್ ಕರೆದಿದ್ದು, ಸದ್ಯ ಎರಡು ಸಂಸ್ಥೆಗಳು ಇನ್ನೆರಡು ದಿನಗಳಲ್ಲಿ ಆರ್ಥಿಕ ಹಾಗು ತಾಂತ್ರಿಕ ವರದಿಯನ್ನ ಸರ್ಕಾರಕ್ಕೆ ಸಲ್ಲಿಸಲಿವೆ. ಗ್ಲೋಬಲ್ ಟೆಂಡರ್ ಅಡಿಯಲ್ಲಿ ಕೋವಿಶೀಲ್ಡ್ ಹಾಗು ಕೊವ್ಯಾಕ್ಸಿನ್ ಲಸಿಕೆ ಖರೀದಿಗೆ ಮುಂದಾಗದ ಸಂಸ್ಥೆಗಳು ರಷ್ಯಾದ ಸ್ಪುಟ್ನಿಕ್ V ಹಾಗು ಸ್ಪುಟ್ನಿಕ್ ಲೈಟ್ ಖರೀದಿಸಲು ಆಸಕ್ತಿ ತೋರಿವೆ ಎನ್ನಲಾಗ್ತಿದೆ.

ದೊಡ್ಡ ಮಟ್ಟದಲ್ಲಿ ಲಸಿಕೆ ಕಾರ್ಯಕ್ರಮ ನೀಡಲು ಸರ್ಕಾರ ಗ್ಲೋಬಲ್ ಟೆಂಡರ್ ಕರೆದಿದ್ದು, ಸುಮಾರು ಆರು ಕೋಟಿ ಲಸಿಕೆ ಖರೀದಿಸಲು ತಯಾರಾಗಿದೆ. ಹಂತ ಹಂತವಾಗಿ ಸರ್ಕಾರ ಜನರಿಗೆ ಲಸಿಕೆ ನೀಡಲು ಬೇಕಾದ ಎಲ್ಲಾ ಯೋಜನೆಗಳನ್ನ ರೂಪಿಸುತ್ತಿದ್ದು, ಗ್ಲೋಬಲ್ ಟೆಂಡರ್​ನಲ್ಲಿ ಖರೀದಿ ಆಗುವ ಬಹುತೇಕ ಪಾಲು ಬೆಂಗಳೂರಿಗೆ ಸೇರಲಿದೆ. ಗ್ಲೋಬಲ್ ಟೆಂಡರ್​ನಲ್ಲಿ ಎರಡು ಸಂಸ್ಥೆಗಳು ಭಾಗವಹಿಸಿದ್ದು, ಆರ್ಥಿಕ ಹಾಗು ತಾಂತ್ರಿಕ ವರದಿಗಳನ್ನ ಸಲ್ಲಿಸಲು ಎರಡು ದಿನಗಳ ಗಡುವು ನೀಡಿದೆ ಎಂದು ಡಿಸಿಎಂ ಹೇಳಿದರು.

ಇದರಲ್ಲಿ ಒಂದು ಸಂಸ್ಥೆ ಸ್ಪುಟ್ನಿಕ್ ಲೈಟ್ ನೀಡಲು ಹೇಳಿಕೊಂಡಿದೆ. ಆದರೆ ಸ್ಪುಟ್ನಿಕ್ ಲೈಟ್ ಉತ್ಪಾದನೆ ಪ್ರಾರಂಭವಾಗುವುದು ಡಿಸೆಂಬರ್​ನಲ್ಲಿ. ಗ್ಲೋಬಲ್ ಟೆಂಡರ್​ನಲ್ಲಿ ಭಾಗವಹಿಸುವ ಎರಡು ಸಂಸ್ಥೆಗಳ ಪೈಕಿ ಒಂದು ಸಂಸ್ಥೆ ಸ್ಪುಟ್ನಿಕ್ Vಲಸಿಕೆ ಖರೀದಿಸಲಿದೆ. ಹಾಗು ಮತ್ತೊಂದು ಸಂಸ್ಥೆಗೆ ಸದ್ಯಕ್ಕೆ ಸ್ಪುಟ್ನಿಕ್ V ಲಸಿಕೆ ಖರೀದಿಸಲು ಮನವೊಲಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ "ಆನ್​ಲೈನ್​ ಲಸಿಕೆಗೆ “ನೋಂದಣಿ ; ನೇರ ನೋಂದಣಿಗೆ ಹೆಚ್ಚು ಒತ್ತು ಕೊಟ್ಟ ಸಿಲಿಕಾನ್ ಸಿಟಿ ಜನ”ಎಂಬ ಸುದ್ದಿಯನ್ನು ಈಟಿವಿ ಭಾರತ ಪ್ರಕಟ ಮಾಡಿದೆ. ಅದರಲ್ಲಿ ಹತ್ತು ಲಕ್ಷ ನಾಗರಿಕರು ನೇರ ನೋಂದಣಿ ಮೂಲಕ ಲಸಿಕೆ ಪಡೆದಿದ್ದು, ಕೇವಲ ನಾಲ್ಕು ಲಕ್ಷ ಜನ ಆನ್ಲೈನ್ ಮೂಲಕ ನೋಂದಣಿ ಮಾಡಿಕೊಂಡು ಲಸಿಕೆಯನ್ನ ಪಡೆದಿದ್ದಾರೆ. ಈ ರೀತಿಯ ಸವಾಲು ಸರ್ಕಾರದ ಮುಂದಿದೆ. ಇದರ ಮಧ್ಯೆ ಇನ್ನು ಎರಡು ದಿನಗಳಲ್ಲಿ ಗ್ಲೋಬಲ್ ಟೆಂಡರ್ ಸ್ಥಿತಿಗತಿ ತಿಳಿಯಲಿದೆ ಎಂದು ಉಪಮುಖ್ಯಮಂತ್ರಿ ಅಶ್ವತ್ಥ್​ ನಾರಾಯಣ 'ಈಟಿವಿ ಭಾರತ'ಕ್ಕೆ ತಿಳಿಸಿದರು.

ಒಟ್ಟಾರೆ ಸರ್ಕಾರ ಡಿಸೆಂಬರ್ ಒಳಗೆ ರಾಜ್ಯದ ಎಲ್ಲಾ ನಾಗರಿಕರಿಗೆ ಒಂದು ಡೋಸ್ ಲಸಿಕೆಯನ್ನಾದರೂ ನೀಡಬೇಕು ಎಂಬ ಗುರಿಯನ್ನು ರೂಪಿಸಿದೆ. ನಗರದಲ್ಲಿ ಈವರೆಗೆ ಶೇ 12ರಷ್ಟು ಮಾತ್ರ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಹಾಗು ಶೇ 3.5 ರಷ್ಟು ನಾಗರಿಕರು ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. 96.5% ಜನರಿಗೆ ಲಸಿಕೆ ನೀಡಲು ಬಾಕಿ ಇದೆ.

ABOUT THE AUTHOR

...view details