ಬೆಂಗಳೂರು:ರಾಜ್ಯದಲ್ಲಿಂದು ಕೊರೊನಾ ಪಾಸಿಟಿವ್ ದರ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದ್ದು, 6835 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 27,71,969ಕ್ಕೆ ಏರಿಕೆಯಾಗಿದೆ. ಇನ್ನು ಪಾಸಿಟಿವಿಟಿ ದರ ಶೇ 4.56ಕ್ಕೆ ಇಳಿಕೆ ಕಂಡಿದೆ. 15,409 ಸೋಂಕಿತರು ಗುಣಮುಖರಾಗಿದ್ದು ಒಟ್ಟು 25,66,774 ಜನರು ಡಿಸ್ಜಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 1,72,141 ರಷ್ಟು ಇದೆ. ಕೋವಿಡ್ಗೆ 120 ಸೋಂಕಿತರು ಮೃತರಾಗಿದ್ದು ಸಾವಿನ ಸಂಖ್ಯೆ 33,033ಕ್ಕೆ ಏರಿದೆ. ಸಾವಿನ ಶೇಕಡವಾರು ಪ್ರಮಾಣ ಶೇ 1.75 ರಷ್ಟು ಇದೆ.
ಇನ್ನು ವಿಮಾನ ನಿಲ್ದಾಣದಿಂದ 363 ಪ್ರಯಾಣಿಕರು ಆಗಮಿಸಿ ತಪಾಸಣೆಗೊಳ್ಳಪಟ್ಟಿದ್ದಾರೆ. ಯುಕೆಯಿಂದ 227 ಮಂದಿ ಆಗಮಿಸಿದ್ದು, 109 ಜನರಲ್ಲಿ ಯುಕೆ ರೂಪಾಂತರಿ ಸೋಂಕು ಪತ್ತೆಯಾಗಿದೆ. ಸೌತ್ ಆಫ್ರಿಕಾ ಸೋಂಕು 6 ಜನರಲ್ಲಿ ಹಾಗೂ ಡಬಲ್ ಮ್ಯುಟೇಷನ್ ಸೋಂಕು 244 ಜನರಲ್ಲಿ ಪತ್ತೆಯಾಗಿದೆ.