ಚಾಮರಾಜನಗರ: ಇತ್ತೀಚೆಗೆ ಆಕ್ಸಿಜನ್ ಕೊರತೆಯಿಂದ ರೋಗಿಗಳು ಸಾವನ್ನಪ್ಪಿದ ಬಳಿಕ ಜಿಲ್ಲಾಸ್ಪತ್ರೆ ದೇಶಾದ್ಯಂತ ಸುದ್ದಿಯಾಗಿತ್ತು. ಇದೀಗ ಆಸ್ಪತ್ರೆಯಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡ ಸೋಂಕಿತ ವ್ಯಕ್ತಿವೋರ್ವ ದಾಂಧಲೆ ನಡೆಸಿ, ಆತಂಕ ಮೂಡಿಸಿದ ಘಟನೆ ಇಂದು ನಡೆದಿದೆ.
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಸೋಂಕಿತ ವ್ಯಕ್ತಿ ದಾಂಧಲೆ: ಕಂಪ್ಯೂಟರ್, ವೆಂಟಿಲೇಟರ್ಗೆ ಹಾನಿ - Mentally disturbed Covid patient create nuisance
ಮಾನಸಿಕ ಸ್ಥಿಮಿತ ಕಳೆದುಕೊಂಡ ಸೋಂಕಿತ ವ್ಯಕ್ತಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ದಾಂಧಲೆ ನಡೆಸಿ ಕಂಪ್ಯೂಟರ್, ವೆಂಟಿಲೇಟರ್ಗಳನ್ನು ಜಖಂಗೊಳಿಸಿರುವುದಾಗಿ ತಿಳಿದುಬಂದಿದೆ.
ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದ 30 ವರ್ಷದ ವ್ಯಕ್ತಿಗೆ ಕೊರೊನಾ ದೃಢವಾಗಿ ಜಿಲ್ಲಾಸ್ಪತ್ರೆಗೆ ಕಳೆದ 30 ರಂದು ದಾಖಲಾಗಿದ್ದ. ಇಂದು ಮಾನಸಿಕ ಸ್ಥಿಮಿತ ಕಳೆದುಕೊಂಡು ಕಂಪ್ಯೂಟರ್ಗಳು, ವೆಂಟಿಲೇಟರ್ಗಳನ್ನು ಹಾನಿ ಮಾಡಿರುವುದಾಗಿ ತಿಳಿದುಬಂದಿದೆ. ಜೊತೆಗೆ, ತನಗೆ ಕೊರೊನಾ ಇಲ್ಲದಿದ್ದರೂ ಏಕೆ ಇಟ್ಟುಕೊಂಡಿದ್ದೀರಿ ಎಂದು ವೈದ್ಯ ಶಿವಣ್ಣ, ದಾದಿಯರನ್ನು ಸೋಂಕಿತ ಎಳೆದಾಡಿದ್ದಾನೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಸದ್ಯ, ಮಾನಸಿಕ ಅಸ್ವಸ್ಥ ಸೋಂಕಿತನನ್ನು ಆ್ಯಂಬುಲೆನ್ಸ್ನಲ್ಲಿ ನಿಮ್ಹಾನ್ಸ್ಗೆ ರವಾನಿಸಿದ್ದು, ಜಿಲ್ಲಾಸ್ಪತ್ರೆಯಲ್ಲಿ ನಿರ್ಮಾಣವಾಗಿದ್ದ ಆತಂಕದ ವಾತಾವರಣ ತಿಳಿಯಾಗುತ್ತಿದೆ.