ಗಂಗಾವತಿ(ಕೊಪ್ಪಳ):ಕೋವಿಡ್ ಸೋಂಕಿತರ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆ ತುರ್ತು ಚಿಕಿತ್ಸೆ ಅನಿವಾರ್ಯತೆ ಹೆಚ್ಚಾಗುತ್ತಿದೆ. ಇದರಿಂದ ಆರೋಗ್ಯ ಕ್ಷೇತ್ರದ ಮೇಲೆ ಇನ್ನಿಲ್ಲದ ಒತ್ತಡ ಬೀಳುತ್ತಿದೆ.
ಫಲಕದಲ್ಲಿ ಕೋವಿಡ್ ಬೆಡ್ಗಳ ಬಗ್ಗೆ ಮಾಹಿತಿ... ಗಂಗಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಹೊಸ ನಡೆ! - ಸರ್ಕಾರಿ ಆಸ್ಪತ್ರೆಯಲ್ಲಿನ ಕೋವಿಡ್ ರೋಗಿಗಳ ಸಂಪೂರ್ಣ ಮಾಹಿತಿ
ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿನ ಕೋವಿಡ್ ರೋಗಿಗಳ ಸಂಪೂರ್ಣ ಮಾಹಿತಿಯನ್ನು ಫಲಕದ ಮೇಲೆ ಬಿತ್ತರಿಸುವ ಮೂಲಕ ಜನರಿಗೆ ಸಂಪೂರ್ಣ ಮಾಹಿತಿ ನೀಡುವ ಕಾರ್ಯಕ್ಕೆ ಇಲ್ಲಿನ ವೈದ್ಯರು ಮುಂದಾಗಿದ್ದಾರೆ.
ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿನ ಕೋವಿಡ್ ರೋಗಿಗಳ ಸಂಪೂರ್ಣ ಮಾಹಿತಿಯನ್ನು ಫಲಕದ ಮೇಲೆ ಬಿತ್ತರಿಸುವ ಮೂಲಕ ಜನರಿಗೆ ಸಂಪೂರ್ಣ ಮಾಹಿತಿ ನೀಡುವ ಕಾರ್ಯಕ್ಕೆ ಇಲ್ಲಿನ ವೈದ್ಯರು ಮುಂದಾಗಿದ್ದಾರೆ. ಆಸ್ಪತ್ರೆಯಲ್ಲಿನ ಒಟ್ಟು ಬೆಡ್ಗಳ ಸಂಖ್ಯೆ, ಖಾಲಿ ಇರುವುದೆಷ್ಟು, ಭರ್ತಿಯಾಗಿರುವುದೆಷ್ಟು, ಆಕ್ಸಿಜನ್, ವೆಂಟಿಲೇಟರ್ ಪ್ರಮಾಣ ಎಷ್ಟು ಎಂಬ ಮಾಹಿತಿ ಬಿತ್ತರಿಸಲಾಗುತ್ತಿದೆ. ಅಲ್ಲದೇ ಮತ್ತೊಂದು ಫಲಕದಲ್ಲಿ ಕರ್ತವ್ಯನಿರತ ವೈದ್ಯರ ಮಾಹಿತಿ ನೀಡಲಾಗುತ್ತಿದೆ.
ಇದರಿಂದ ಯಾವುದಾದರೂ ರೋಗಿಗಳು ತುರ್ತು ಚಿಕಿತ್ಸೆ ಎಂದು ಬಂದಾಗ ನೇರವಾಗಿ ವೈದ್ಯರನ್ನು ಸಂಪಕರ್ಕಿಸಲು ಸಾಧ್ಯ. ಅಲ್ಲದೆ ಕೋವಿಡ್ ಮಾಹಿತಿಯಿಂದ ತಕ್ಷಣ ಬೆಡ್ ಇರುವ ಆಸ್ಪತ್ರೆಗಳನ್ನು ಹುಡುಕಿಕೊಳ್ಳಲು ಸಾಧ್ಯವಾಗುತ್ತದೆ. ಅಮೂಲ್ಯ ಜೀವ ಉಳಿಸಲು ನೆರವಾದಂತಾಗುತ್ತದೆ ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದಾರೆ.