ಕರ್ನಾಟಕ

karnataka

ETV Bharat / briefs

ಅಥಣಿ ಪಟ್ಟಣದ ಬಯಲು ಪ್ರದೇಶದಲ್ಲಿ ರೋಟಾವೈರಸ್ ಬಿಸಾಕಿ ಹೋದ ಕಿಡಿಗೇಡಿಗಳು!

ಸರಿಸುಮಾರು ಒಂದು ಬಾಕ್ಸ್​ನಷ್ಟು ರೋಟಾವೈರಸ್ ಲಸಿಕೆಯನ್ನು ಕಿಡಿಗೇಡಿಗಳು ಬಯಲು ಪ್ರದೇಶದಲ್ಲಿ ಬಿಸಾಕಿ ಹೋಗಿದ್ದಾರೆ. ಈ ಲಸಿಕೆ ಸರ್ಕಾರಿ ಆಸ್ಪತ್ರೆಯಲ್ಲಿ ಬಳಸುವ ಲಸಿಕೆಯೆಂದು ಅದರ ಮೇಲೆ ಬರೆಯಲಾಗಿದೆ.

Covaccine
Covaccine

By

Published : May 8, 2021, 4:47 PM IST

Updated : May 8, 2021, 6:21 PM IST

ಅಥಣಿ(ಬೆಳಗಾವಿ):ದೇಶದಲ್ಲಿ ರೋಟಾವೈರಸ್ ಪಡೆದುಕೊಳ್ಳಲು ಅದೆಷ್ಟು ಮಕ್ಕಳು ಪರದಾಡುತ್ತಿದ್ದಾರೆ. ಆದರೆ ಅಥಣಿ ಪಟ್ಟಣದ ಬಯಲು ಪ್ರದೇಶದಲ್ಲಿ ರೋಟಾವೈರಸ್ ಬಿಸಾಕಿರುವ ಘಟನೆ ಬೆಳಕಿಗೆ ಬಂದಿದೆ.

ಪಟ್ಟಣದ ಎಲ್ಐಸಿ ಆಫೀಸ್ ಪಕ್ಕದಲ್ಲಿ ಸರಿಸುಮಾರು ಒಂದು ಬಾಕ್ಸ್​ನಷ್ಟು ರೋಟಾವೈರಸ್ ಲಸಿಕೆಯನ್ನು ಕಿಡಿಗೇಡಿಗಳು ಬಯಲು ಪ್ರದೇಶದಲ್ಲಿ ಬಿಸಾಕಿ ಹೋಗಿದ್ದಾರೆ. ಈ ಲಸಿಕೆ ಸರ್ಕಾರಿ ಆಸ್ಪತ್ರೆಯಲ್ಲಿ ಬಳಸುವ ಲಸಿಕೆಯೆಂದು ಅದರ ಮೇಲೆ ಬರೆಯಲಾಗಿದೆ. ಅಥಣಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಥಣಿ ತಾಲೂಕು ಆಸ್ಪತ್ರೆ ಅಧಿಕಾರಿಗಳು ನಮ್ಮ ಆಸ್ಪತ್ರೆಯ ಲಸಿಕೆ ಅಲ್ಲವೆಂದು ತಿಳಿಸಿದ್ದಾರೆ. ಅದೆಷ್ಟೋ ಜನರಿಗೆ ರೋಟಾವೈರಸ್ ನೀಡಲು ಸರ್ಕಾರ ಪ್ರಯತ್ನಿಸುತ್ತಿದೆ. ಕೆಲವು ಕಿಡಿಗೇಡಿಗಳ ದುರಹಂಕಾರದಿಂದ ಮಕ್ಕಳ ಆರೋಗ್ಯ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಸ್ಥಳೀಯ ಪೊಲೀಸರು ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರನ್ನು ಬಂಧಿಸುವಂತೆ ಕಾಂಗ್ರೆಸ್ ಮುಖಂಡ ಧರೇಪ್ಪ ಟಕ್ಕಣ್ಣವರ್ ಒತ್ತಾಯಿಸಿದರು.

Last Updated : May 8, 2021, 6:21 PM IST

ABOUT THE AUTHOR

...view details