ಕರ್ನಾಟಕ

karnataka

ETV Bharat / briefs

ಮಹಾ ತೀರ್ಪಿಗೆ ಕ್ಷಣಗಣನೆ: ಯಾರ ಕೈ ಹಿಡಿಯಲಿದ್ದಾನೆ ಮತದಾರ ಪ್ರಭು... ದೇಶದ ಚುಕ್ಕಾಣಿ ಯಾರಿಗೆ!? - ಮತದಾರಪ್ರಭು

ಮಹಾ ಚುನಾವಣೆ ತೀರ್ಪಿಗೆ ಕ್ಷಣಗಣನೆ ಆರಂಭಗೊಂಡಿದ್ದು, ಕೆಲವೇ ಗಂಟೆಗಳಲ್ಲಿ ಎಲ್ಲರ ಭವಿಷ್ಯ ಬಹಿರಂಗಗೊಳ್ಳಲಿದ್ದು, ಮತದಾರ ಪ್ರಭು ಯಾರ ಕೈಹಿಡಿದಿದ್ದಾನೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.

ದೇಶದ ಚುಕ್ಕಾಣಿ ಯಾರಿಗೆ

By

Published : May 23, 2019, 6:26 AM IST

Updated : May 23, 2019, 6:33 AM IST

ನವದೆಹಲಿ: ಲೋಕಸಭೆಗೆ ನಡೆದ ಏಳು ಹಂತದ ಮತದಾನದ ಕ್ಲೈಮ್ಯಾಕ್ಸ್​ ಇಂದು ಹೊರಬೀಳಲಿದೆ. ಇದರೊಂದಿಗೆ ಮತದಾರಪ್ರಭು ಯಾರ ಕೈಹಿಡಿಯಲಿದ್ದಾನೆ, ಮುಂದಿನ ಐದು ವರ್ಷಗಳ ಕಾಲ ದೇಶದ ಚುಕ್ಕಾಣಿ ಯಾರ ಕೈಗೆ ಸಿಗಲಿದೆ ಎಂಬ ಕುತೂಹಲಕ್ಕೂ ಉತ್ತರ ದೊರೆಯಲಿದೆ.

ಒಟ್ಟು 43 ದಿನಗಳ ಕಾಲ 7 ಹಂತದಲ್ಲಿ ನಡೆದ 17ನೇ ಲೋಕಸಭಾ ಚುನಾವಣೆಯ ಮತ ಎಣಿಕೆ 8ಗಂಟೆಗೆ ಆರಂಭಗೊಳ್ಳಲಿದೆ. ಅದಕ್ಕಾಗಿ ಕೇಂದ್ರ ಚುನಾವಣಾ ಆಯೋಗ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಂಡಿದೆ. ಈಗಾಗಲೇ ಹೊರಬಿದ್ದಿರುವ ಚುನಾವಣಾ ಸಮೀಕ್ಷೆಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರಕ್ಕೆ ಬಹುಮತ ದೊರೆಯಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಆದರೆ ವಿಪಕ್ಷಗಳು ಇದನ್ನ ನಂಬಿಲ್ಲ.

ದೇಶದ ಒಟ್ಟು 543 ಕ್ಷೇತ್ರಗಳ ಪೈಕಿ 542 ಕ್ಷೇತ್ರಗಳಿಗೆ ಮತದಾನವಾಗಿದ್ದು, ತಮಿಳುನಾಡಿನ ವೆಲ್ಲೂರಿನಲ್ಲಿ ವೋಟಿಂಗ್​ ಆಗಿಲ್ಲ. ಚುನಾವಣೆಗೆ ಸ್ಪರ್ಧೆ ಮಾಡಿದ್ದ ಎನ್‌ಡಿಎ, ಯುಪಿಎ, ಮಹಾಘಟಬಂಧನ್‌, ತೃಣಮೂಲ ಕಾಂಗ್ರೆಸ್‌ ಸೇರಿದಂತೆ ಪ್ರಮುಖ ಪಕ್ಷ, ಮಿತ್ರಕೂಟಗಳ ಹಣೆಬರಹ ಕೆಲವೇ ಗಂಟೆಗಳಲ್ಲಿ ಹೊರಬೀಳಲಿದೆ.

ಈ ಹಿಂದೆ 2014ರಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಎನ್‍ಡಿಎ 334, ಯುಪಿಎ 59, ಇತರೆ 150 ಸ್ಥಾನಗಳನ್ನು ಗೆದ್ದಿತ್ತು. ಕರ್ನಾಟಕದಲ್ಲಿ ಬಿಜೆಪಿ 17, ಕಾಂಗ್ರೆಸ್ 9, ಜೆಡಿಎಸ್ 2 ಸ್ಥಾನಗಳನ್ನು ಗೆದ್ದುಕೊಂಡಿತ್ತು

  • 542: ಮತದಾನ ನಡೆದ ಕ್ಷೇತ್ರ
  • 271: ಮ್ಯಾಜಿಕ್‌ ನಂಬರ್‌
  • 8,049: ಒಟ್ಟು ಅಭ್ಯರ್ಥಿಗಳು
  • 67.11: ಮತದಾನ ಪ್ರಮಾಣ
  • ಫಲಿತಾಂಶ 4 ಗಂಟೆ ವಿಳಂಬ

ಈಗಾಗಲೇ ಇವಿಎಂ ಮತಯಂತ್ರದ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ವಿಪಕ್ಷಗಳ ಬೇಡಿಕೆಯನ್ನ ಚುನಾವಣಾ ಆಯೋಗ ಕೂಡ ತಿರಸ್ಕರಿಸಿದೆ. ಮತ ಎಣಿಕೆ ಮುಕ್ತಾಯಗೊಂಡ ಬಳಿಕ ಮಾತ್ರ ವಿವಿಪ್ಯಾಟ್​ ರಶೀದಿಗಳ ತಾಳೆ ಎಂದಿದೆ. ಇನ್ನು ಫಲಿತಾಂಶ ಹೊರಬೀಳಲಿರುವ ಕಾರಣ ಪ್ರಮುಖ ಪ್ರದೇಶಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್​ ಮಾಡಲಾಗಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ.

ಅಸೆಂಬ್ಲಿ ತೀರ್ಪು
ಆಂಧ್ರಪ್ರದೇಶ, ಒಡಿಶಾ, ಅರುಣಾಚಲ ಪ್ರದೇಶ ಹಾಗೂ ಸಿಕ್ಕಿಂ ವಿಧಾನಸಭೆಗೆ ನಡೆದ ಚುನಾವಣೆ ತೀರ್ಪು ಸಹ ಇಂದು ಪ್ರಕಟವಾಗಲಿದೆ.

Last Updated : May 23, 2019, 6:33 AM IST

ABOUT THE AUTHOR

...view details