ಅಥಣಿ: ನಿನ್ನೆ ರಾತ್ರಿ ತಾಲೂಕು ವೈದ್ಯಾಧಿಕಾರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರು ಹೋಮ್ ಐಸೊಲೇಷನ್‌ಗೆ ಒಳಪಟ್ಟಿದ್ದಾರೆ.
ಅಥಣಿ ವೈದ್ಯಾಧಿಕಾರಿಗೆ ಕೊರೊನಾ ಸೋಂಕು - Coronavirus update
ಅಥಣಿ ತಾಲೂಕಿನ ವೈದ್ಯಾಧಿಕಾರಿಗೆ ಕೊರೊನಾ ಸೋಂಕು ತಗುಲಿದ್ದು, ಅವರ ಸಂಪರ್ಕಕ್ಕೆ ಬಂದವರು ಕ್ವಾರಂಟೈನ್ ಆಗಿದ್ದಾರೆ.
![ಅಥಣಿ ವೈದ್ಯಾಧಿಕಾರಿಗೆ ಕೊರೊನಾ ಸೋಂಕು Government Hospital](https://etvbharatimages.akamaized.net/etvbharat/prod-images/768-512-01:56:55:1596702415-n-ath-03-06-khorona-taluka-health-officer-av-kac10006-06082020135410-0608f-1596702250-771.jpg)
Government Hospital
ವೈದ್ಯರ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಕ್ವಾರಂಟೈನ್ ಆಗಿದ್ದಾರೆ. ಕೆಲಸ ಮಾಡುತ್ತಿದ್ದ ಆಸ್ಪತ್ರೆಗೆ ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗಿದೆ ಎಂದು ವೈದ್ಯಾಧಿಕಾರಿ ಚನ್ನಗೌಡ ಪಾಟೀಲ್ ಅವರು ಈಟಿವಿ ಭಾರತಕ್ಕೆ ದೂರವಾಣಿ ಮೂಲಕ ಮಾಹಿತಿ ನೀಡಿದರು.
ತಾಲೂಕಿನಲ್ಲಿ ಈವರೆಗೂ 500ಕ್ಕೂ ಅಧಿಕ ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 47 ಮಂದಿ ಮೃತಪಟ್ಟಿದ್ದಾರೆ ಎಂದು ತಾಲೂಕು ಹೆಲ್ತ್ ಬುಲೆಟಿನ್ ಹೇಳುತ್ತಿದೆ.