ಕರ್ನಾಟಕ

karnataka

ETV Bharat / briefs

ಸೀಜ್ ಮಾಡಿದ ವಾಹನ ವಾಪಸ್ ನೀಡುವುದಿಲ್ಲ: ಡಿಸಿಪಿ ಪ್ರಕಾಶಗೌಡ ಎಚ್ಚರಿಕೆ

ಅನಗತ್ಯವಾಗಿ ಓಡಾಟ ಮಾಡಿದ್ದ ವಾಹನಗಳನ್ನ ವಶಪಡಿಸಿಕೊಳ್ಳಲಾಗಿದೆ. ವಾಹನ ಸವಾರರು ಸ್ಪಷ್ಟ ಕಾರಣ ನೀಡಿ, ನ್ಯಾಯಾಲಯಕ್ಕೆ ದಾಖಲೆ ಸಲ್ಲಿಸಬೇಕು. ಇಲ್ಲದಿದ್ದರೆ ಶಾಶ್ವತವಾಗಿ ಅವರ ವಾಹನಗಳನ್ನು ಸೀಜ್ ಮಾಡುವುದರ ಜೊತೆಗೆ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುವುದು ಎಂದು ಡಿಸಿಪಿ‌ ಡಾ.ಪ್ರಕಾಶಗೌಡ ಅವರು ತಿಳಿಸಿದರು.

Corona rules violation vehicles sezied permanently
Corona rules violation vehicles sezied permanently

By

Published : May 1, 2021, 4:08 PM IST

Updated : May 1, 2021, 7:05 PM IST

ಮೈಸೂರು: ಕೊರೊನಾ ನಿಯಮ ಉಲ್ಲಂಘಿಸಿ ಅನಗತ್ಯ ಸಂಚಾರ ಮಾಡುವ ವಾಹನಗಳನ್ನು ಸೀಜ್ ಮಾಡಿದರೆ, ಆ ವಾಹನಗಳನ್ನು ಮತ್ತೆ ಕೊಡುವುದಿಲ್ಲ‌ ಎಂದು ಡಿಸಿಪಿ‌ ಡಾ. ಪ್ರಕಾಶಗೌಡ ಅವರು ಎಚ್ಚರಿಕೆ ಕೊಟ್ಟಿದ್ದಾರೆ.

ಸೀಜ್ ಮಾಡಿದ ವಾಹನ ವಾಪಸ್ ನೀಡುವುದಿಲ್ಲ: ಡಿಸಿಪಿ ಪ್ರಕಾಶಗೌಡ ಎಚ್ಚರಿಕೆ



ನಗರದಲ್ಲಿ ಸಿಬ್ಬಂದಿಯ ವಾಹನ ತಪಾಸಣೆ ಕ್ರಮವನ್ನು ಪರಿಶೀಲಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅನಗತ್ಯವಾಗಿ ಓಡಾಟ ಮಾಡಿದ್ದ ವಾಹನಗಳನ್ನ ವಶಪಡಿಸಿಕೊಳ್ಳಲಾಗಿದೆ. ವಾಹನ ಸವಾರರು ಸ್ಪಷ್ಟ ಕಾರಣ ನೀಡಿ, ನ್ಯಾಯಾಲಯಕ್ಕೆ ದಾಖಲೆ ಸಲ್ಲಿಸಬೇಕು. ಇಲ್ಲದಿದ್ದರೆ ಶಾಶ್ವತವಾಗಿ ಅವರ ವಾಹನಗಳನ್ನು ಸೀಜ್ ಮಾಡುವುದರ ಜೊತೆಗೆ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುವುದು ಎಂದರು.

ಅಗತ್ಯವಸ್ತುಗಳ ಖರೀದಿಗಾಗಿ ಬೆಳಗ್ಗೆ ಸಮಯ ನಿಗದಿಗೊಳಿಸಲಾಗಿದೆ. ಆದರೂ ಕೆಲವರು ಅನಗತ್ಯವಾಗಿ ಸಂಚಾರ ಮಾಡುತ್ತಿದ್ದಾರೆ. ಇಂಥವರ ವಿರುದ್ಧ ಕಠಿಣ ಕ್ರಮ‌ ಕೈಗೊಳ್ಳಲಾಗುವುದು ಎಂದು ಹೇಳಿದರು.

Last Updated : May 1, 2021, 7:05 PM IST

ABOUT THE AUTHOR

...view details