ಕರ್ನಾಟಕ

karnataka

ETV Bharat / briefs

ಶೇಕಡ 88ಕ್ಕೆ ಏರಿಕೆ ಕಂಡ ಮಂಡ್ಯ ಜಿಲ್ಲೆಯ ಕೊರೊನಾ ಸೋಂಕಿತರ ಗುಣಮುಖ ಸಂಖ್ಯೆ - ಕೊರೊನಾ ವೈರಸ್

ರಾಜ್ಯದಲ್ಲಿ ಮಹಾರಾಷ್ಟ್ರ ವಲಸಿಗರ ಆಗಮನದಿಂದ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೆ ಮಿಮ್ಸ್ ವೈದ್ಯರ ಚಿಕಿತ್ಸೆಯಿಂದ ಸೋಂಕಿತರಲ್ಲಿ ಶೇಕಡಾ 88.33% ಮಂದಿ ಗುಣಮುಖರಾಗಿದ್ದು, ಮಂಡ್ಯ ಜಿಲ್ಲೆಯ ಜನರು ನೆಮ್ಮದಿಯಿಂದ ಇರುವಂತೆ ಮಾಡಿದೆ.

Corona patients decreasing in madya district
Corona patients decreasing in madya district

By

Published : Jun 19, 2020, 10:34 PM IST

ಮಂಡ್ಯ: 'ಮಹಾ' ಸೋಂಕು ಹೆಚ್ಚಾಗುತ್ತಿದ್ದಂತೆ ಜಿಲ್ಲೆಯಲ್ಲಿ ಆತಂಕ ಮನೆ ಮಾಡಿತ್ತು. ಆದರೆ ಮಿಮ್ಸ್ ವೈದ್ಯರ ಚಿಕಿತ್ಸೆಯಿಂದ ಸೋಂಕಿತರಲ್ಲಿ ಶೇಕಡಾ 88.33% ಮಂದಿ ಗುಣಮುಖರಾಗಿದ್ದು, ಆತಂಕವನ್ನು ದೂರ ಮಾಡಿದೆ.

ಇಲ್ಲಿವರೆಗೂ ಜಿಲ್ಲೆಯಲ್ಲಿ ಒಟ್ಟು 360 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಇವರಲ್ಲಿ ಶೇಕಡ 90ಕ್ಕೂ ಹೆಚ್ಚು ಮಂದಿ ಮುಂಬೈ ಸೋಂಕಿತರೇ ಆಗಿದ್ದರು. ಸದ್ಯ ಈಗ ಒಟ್ಟು ಸೋಂಕಿತರಲ್ಲಿ 318 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.

ಇಂದು ಕೂಡಾ ಮುಂಬೈನಿಂದ ಬಂದ ಮೂವರಲ್ಲಿ ಸೋಂಕು ಕಂಡು ಬಂದಿದೆ. 14 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ABOUT THE AUTHOR

...view details