ಕರ್ನಾಟಕ

karnataka

ETV Bharat / briefs

ವಿಕ್ಟೋರಿಯಾದ 4ನೇ ಮಹಡಿಯಿಂದ ಜಿಗಿದು ಕೊರೊನಾ ರೋಗಿ ಆತ್ಮಹತ್ಯೆ!! - ವಿಕ್ಟೋರಿಯ ಆಸ್ಪತ್ರೆಯಲ್ಲಿ ಕೊರೊನಾ ರೋಗಿ ಆತ್ಮಹತ್ಯೆ

ಇಂದು ಮಧ್ಯಾಹ್ನ ನಾಲ್ಕನೇ ಮಹಡಿಯಿಂದ ಜಿಗಿದು ನೆಲಕ್ಕೆ ಬಿದ್ದಿದ್ದಾರೆ‌‌. ಬಿದ್ದ ರಭಸಕ್ಕೆ ರಕ್ತಸ್ರಾವವಾಗಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿರುವ ಕುಮಾರ್ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

suicide
suicide

By

Published : Apr 28, 2021, 6:54 PM IST

ಬೆಂಗಳೂರು:ವಿಕ್ಟೋರಿಯಾ ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಕೊರೊನಾ ಸೋಂಕಿತನೊಬ್ಬ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ

ಕುಮಾರ್(27) ಆತ್ಮಹತ್ಯೆ ಮಾಡಿಕೊಂಡ ಯುವಕ. ಹೊಂಗಸಂದ್ರ ನಿವಾಸಿಯಾಗಿರುವ ಕುಮಾರ್​ಗೆ ಸೋಂಕು ತಗುಲಿದ್ದರಿಂದ ಏ.25ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅಂದಿನಿಂದ ಚಿಕಿತ್ಸೆ ಪಡೆಯುತ್ತಿದ್ದರು‌. ಇಂದು ಮಧ್ಯಾಹ್ನ ನಾಲ್ಕನೇ ಮಹಡಿಯಿಂದ ಜಿಗಿದು ನೆಲಕ್ಕೆ ಬಿದ್ದಿದ್ದಾರೆ‌‌. ಬಿದ್ದ ರಭಸಕ್ಕೆ ರಕ್ತಸ್ರಾವವಾಗಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿರುವ ಕುಮಾರ್ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ವಿವಿಪುರಂ ಪೊಲೀಸರು ಪ್ರಾಥಮಿಕ ಮಾಹಿತಿ ಕಲೆ ಹಾಕಿದ್ದಾರೆ‌. ಆತ್ಮಹತ್ಯೆ ಯತ್ನಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.

ABOUT THE AUTHOR

...view details