ಕರ್ನಾಟಕ

karnataka

ETV Bharat / briefs

ಬೆಂಗಳೂರಿನಿಂದ ಬಂದ 8 ತಿಂಗಳ ಗರ್ಭಿಣಿಗೆ ಕೊರೊನಾ: ಶಿವಮೊಗ್ಗದಲ್ಲಿ 11 ಕಂಟೈನ್ಮೆಂಟ್ ಝೋನ್ - ಶಿವಮೊಗ್ಗ ಜಿಲ್ಲಾ ಸುದ್ದಿ

ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಅಲ್ಲದೆ ಜಿಲ್ಲೆಯಲ್ಲಿ ಒಟ್ಟು ಕಂಟೈನ್ಮೆಂಟ್ ಝೋನ್ ಗಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

Corona cases raising in shivamogga district
Corona cases raising in shivamogga district

By

Published : Jun 11, 2020, 4:09 PM IST

ಗಿಶಿವಮೊಗ್ಗ:ಬೆಂಗಳೂರಿನಿಂದ ಬಂದ 8 ತಿಂಗಳ ಗರ್ಭಿಣಿಗೆ ಕೊರೊನಾ ಸೋಂಕು ತಗುಲಿದ್ದು ಇಲ್ಲಿನ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮಹಿಳೆಯು ಸೋಮವಾರ ಬೆಂಗಳೂರಿನಿಂದ ಭದ್ರಾವತಿಗೆ ಆಗಮಿಸಿದ್ದರು. ಅಂದೇ ಅವರ ಸ್ವಾಬ್ ಪರೀಕ್ಷೆ ನಡೆಸಲಾಗಿತ್ತು. ನಿನ್ನೆ ರಾತ್ರಿ ಪಾಸಿಟಿವ್ ವರದಿ ಬಂದ ಕಾರಣ‌ ಅವರನ್ನು ಆಸ್ಪತ್ರೆಗೆ ಕರೆತರಲಾಗಿದೆ.

ಘಟನೆಯಿಂದಾಗಿ ಇಂದು ಬೆಳಗ್ಗೆ ಭದ್ರಾವತಿಯ ಮಹಿಳೆಯ ಮನೆ ಸೇರಿ ಚನ್ನಗಿರಿ ರಸ್ತೆಯನ್ನು ಸೀಲ್ ಡೌನ್ ಮಾಡಲಾಗಿದೆ. ಇದರಿಂದ ಈ ಭಾಗದ ವಾಹನ ಸಂಚಾರವನ್ನು ಬಂದ್​ ಮಾಡಿ ಪರ್ಯಾಯ ಮಾರ್ಗ ವ್ಯವಸ್ಥೆ ಮಾಡಲಾಗಿದೆ.

ಸೀಲ್ ಡೌನ್ ಮಾಡಿದ ಕಾರಣ ರಸ್ತೆ ಎರಡು ಬದಿ ಬ್ಯಾರಿಕೇಡ್​ ಹಾಕಲಾಗಿದೆ. ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಮಹಿಳೆಯ ಪ್ರಥಮ ಸಂಪರ್ಕದವರನ್ನು ಸಹ ಕ್ವಾರಂಟೈನ್ ಮಾಡಲಾಗಿದೆ.

11 ಕಂಟೈನ್ಮೆಂಟ್​ ಝೋನ್​: ಶಿವಮೊಗ್ಗ ನಗರದ ಕುಂಬಾರ ಗುಂಡಿಯ ವ್ಯಕ್ತಿಯೊಬ್ಬರು ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೂ ಕೊರೊನಾ ಪಾಸಿಟಿವ್ ಕಂಡು ಬಂದ ಕಾರಣ ಕುಂಬಾರ ಗುಂಡಿಯನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ.

ಶಿವಮೊಗ್ಗ ಹೊರ ವಲಯದ ಕಲ್ಲುಗಂಗೂರು ಗ್ರಾಮದ ಆಶ್ರಮದ ಸ್ಚಾಮಿಜಿಗಳಿಗೂ ಸಹ ಪಾಸಿಟಿವ್ ಬಂದ ಕಾರಣ ಆ ಭಾಗವನ್ನು‌ ಕಂಟೈನ್ಮೆಂಟ್ ವಲಯವನ್ನಾಗಿ ಘೋಷಿಸಲಾಗಿದೆ.

ಇದರಿಂದ ಜಿಲ್ಲೆಯ ಮೂರು ಕಂಟೈನ್ಮೆಂಟ್ ಝೋನ್ ಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಸದ್ಯ ಜಿಲ್ಲೆಯಲ್ಲಿ ಕಂಟೈನ್ಮೆಂಟ್ ಝೋನ್ ಸಂಖ್ಯೆ 11ಕ್ಕೆ ಏರಿಕೆಯಾಗಿವೆ.

ABOUT THE AUTHOR

...view details