ಕರ್ನಾಟಕ

karnataka

ETV Bharat / briefs

ಹಲ್ಯಾಳ ಕಲ್ಯಾಣ ಮಂಟಪದಲ್ಲಿ ಆಕ್ಸಿಜನ್ ಸಹಿತ ಕೋವಿಡ್ ಆಸ್ಪತ್ರೆ ನಿರ್ಮಾಣ: ಡಿಸಿಎಂ ಸವದಿ - ಡಿಸಿಎಂ ಸವದಿ

ಸೋಂಕಿತರಿಗೆ ತೊಂದರೆ ಉಂಟಾಗದಂತೆ ಹಲವಾರು ಕ್ರಮಗಳನ್ನು ಸರ್ಕಾರ ಈಗಾಗಲೇ ಅನುಸರಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾ ವೈರಸ್ ಚೈನ್​ ಕಟ್ ಮಾಡಬೇಕಾಗಿದೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದ್ದಾರೆ.

Construction of Covid Hospital with oxygen at kalyan mantapa
Construction of Covid Hospital with oxygen at kalyan mantapa

By

Published : May 11, 2021, 10:41 PM IST

ಅಥಣಿ: ತಾಲೂಕಿನಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬಿದ್ದರಿಂದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಬೆಡ್ ಪೂರ್ಣವಾಗಿದ್ದು, ಈ ಹಿನ್ನೆಲೆ ಕೊರೊನಾ ಸೋಂಕಿತರಿಗೆ ಹಲ್ಯಾಳ ಸಕ್ಕರೆ ಕಾರ್ಖಾನೆ ಕಲ್ಯಾಣ ಮಂಟಪದಲ್ಲಿ ಐವತ್ತು ಆಮ್ಲಜನಕ ಸಹಿತ ಬೆಡ್ ನಿರ್ಮಾಣಕ್ಕೆ ಡಿಸಿಎಂ ಲಕ್ಷ್ಮಣ್ ಸವದಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅಥಣಿ ಪಟ್ಟಣದ ಎಲ್ ಎಚ್ ಕುಲಕರ್ಣಿ ಸಭಾ ಭವನದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಜೊತೆ ಡಿಸಿಎಂ ಸವದಿ ಸಭೆ ನಡೆಸಿದರು. ನಂತರದಲ್ಲಿ ಮಾಧ್ಯಮದ ಜೊತೆ ಮಾತನಾಡಿ, ಕೊರೊನಾ ಸೋಂಕು ನಿಯಂತ್ರಣ ತರುವುದಕ್ಕೆ ಖಾಸಗಿ, ಹಾಗೂ ಸರ್ಕಾರಿ ವೈದ್ಯರ ಜೊತೆ ಅಥಣಿಯಲ್ಲಿ ಸಭೆ ನಡೆಸಲಾಯಿತು.

ಸೋಂಕಿತರಿಗೆ ತೊಂದರೆ ಉಂಟಾಗದಂತೆ ಹಲವಾರು ಕ್ರಮಗಳನ್ನು ಸರ್ಕಾರ ಈಗಾಗಲೇ ಅನುಸರಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕೊರೊನಾ ವೈರಸ್ ಚೈನ್​ ಕಟ್ ಮಾಡಬೇಕಾಗಿದೆ. ಅಥಣಿಯಲ್ಲಿ ಔಷದ ಹಾಗೂ ಆಮ್ಲಜನಕ ತೊಂದರೆ ಆಗದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಾಗೂ ಅಥಣಿ ಹೊರವಲಯದಲ್ಲಿ ನೂತನವಾಗಿ ಐವತ್ತು ಬೆಡ್​ ಆಸ್ಪತ್ರೆ ನಿರ್ಮಾಣಕ್ಕೆ ವೈದ್ಯರ ಜೊತೆ ಸಮಾಲೋಚನೆ ನಡೆಸಲಾಗಿದೆ. ಈ ಆಸ್ಪತ್ರೆಯಿಂದ ತಾಲೂಕಿನ ಜನರಿಗೆ ಅನುಕೂಲವಾಗುವುದರಿಂದ ಪಕ್ಕದ ಮಹಾರಾಷ್ಟ್ರ ವಿಜಯಪುರ ಬೆಳಗಾವಿ ನಗರಗಳಿಗೆ ಸೋಂಕಿತರು ಹೋಗುವುದು ತಪ್ಪುತ್ತದೆ ಎಂದರು.

ಪಟ್ಟಣದಲ್ಲಿ ನಾನು ಎರಡು ದಿನದ ವರೆಗೆ ಇದ್ದು ನಮ್ಮ ಮುಂದಾಳತ್ವದಲ್ಲಿ ಹಲ್ಯಾಳ ಸಕ್ಕರೆ ಕಾರ್ಖಾನೆಯ ಕಲ್ಯಾಣ ಮಂಟಪದಲ್ಲಿ ಆಕ್ಸಿಜನ್ ಸಹಿತ ಕೋವಿಡ್ ಆಸ್ಪತ್ರೆ ತೆರೆಯುವಂತೆ ವ್ಯವಸ್ಥೆ ಮಾಡುತ್ತೇನೆ. ಸಂಪೂರ್ಣವಾಗಿ ಉಚಿತವಾಗಿ ಅಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಿದರು.

ಒಂದು ತಿಂಗಳ ಒಳಗಾಗಿ ಅಥಣಿಯಲ್ಲಿ ಆಕ್ಸಿಜನ್ ಘಟಕ ಸ್ಥಾಪನೆ ಮಾಡಲಾಗುವುದು. ತಾಲೂಕಿನಲ್ಲಿ ಹೆಚ್ಚಿನ ಜನಸಂಖ್ಯೆ ಹೊಂದಿದ್ದು ಮುಂದಿನ ದಿನಗಳಲ್ಲಿ ಅಥಣಿ ತಾಲೂಕಿಗೆ ಇನ್ನೂಂದು ಉನ್ನತ ಮಟ್ಟದ ಆಸ್ಪತ್ರೆ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ ಎಂದು ಪ್ರತಿಕ್ರಿಯಿಸಿದರು.

ABOUT THE AUTHOR

...view details