ಕರ್ನಾಟಕ

karnataka

ETV Bharat / briefs

ಇನ್ನೆಂಟು ತಿಂಗಳು ಧರ್ಮಸ್ಥಳದಲ್ಲಿ ನೀರಿನ ಬವಣೆ ಇಲ್ಲ: ವೀರೇಂದ್ರ ಹೆಗ್ಗಡೆ - undefined

ಧರ್ಮಸ್ಥಳದಲ್ಲಿ ಉಂಟಾದ ನೀರಿನ ಕೊರತೆ ಕಡಿಮೆಯಾಗಿದೆ. ಬಯಲು ಸೀಮೆ ಜತೆಗೆ ಮಲೆನಾಡ ಜನರು ನೀರಿನ ಸಂರಕ್ಷಣೆಗೆ ಮುಂದಾಗಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಕಿವಿಮಾತು ಹೇಳಿದರು.

ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗಡೆ ಅವರಿಂದ ನೀರಿನ ಕೊಯ್ಲು ಯೋಜನೆಗೆ ಚಾಲನೆ ನೀಡಿದರು.

By

Published : Jun 16, 2019, 1:26 PM IST

ನೆಲಮಂಗಲ: ಧರ್ಮಸ್ಥಳದಲ್ಲಿ ನೀರಿನ ಸಮಸ್ಯೆ ಪರಿಹಾರವಾಗಿದೆ. ಮಲೆನಾಡಿನಲ್ಲಿ ಉತ್ತಮ ಮಳೆಯಾಗಿದ್ದು, ಮುಂದಿನ 8 ತಿಂಗಳವರೆಗೆ ನೀರಿನ ಅಭಾವವಿಲ್ಲ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ತಿಳಿಸಿದರು.

ನೀರಿನ ಕೊಯ್ಲು ಯೋಜನೆಗೆ ಚಾಲನೆ ನೀಡಿದ ಡಾ.ಡಿ ವೀರೇಂದ್ರ ಹೆಗ್ಗಡೆ

ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಹುಚ್ಚೇಗೌಡನಪಾಳ್ಯದಲ್ಲಿ ಮಳೆ ನೀರಿನ ಕೊಯ್ಲು ಹಾಗೂ ತಪೋವನದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬಯಲು ಸೀಮೆ ಸೇರಿದಂತೆ ಮಲೆನಾಡ ನಿವಾಸಿಗಳು ಕೂಡಾ ನೀರಿನ ಸಂರಕ್ಷಣೆಗೆ ಮಾಡುವುದು ಅಗತ್ಯ. ಬೇಸಿಗೆಯಲ್ಲಿ ಉಂಟಾದ ನೀರಿನ ಕೊರತೆಯಿಂದ ನಾವೆಲ್ಲ ಅದರ ಮೌಲ್ಯವನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.

ಎಲ್ಲಾ ಹಳ್ಳಿಗಳಲ್ಲೂ ನೀರಿನ ಸಮಸ್ಯೆ ಇದೆ. ಅವುಗಳನ್ನು ಗುರುತಿಸುವ, ಅರಿತುಕೊಳ್ಳುವ ಕಾರ್ಯವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಯವರು ಗ್ರಾಮ ವಾಸ್ತವ್ಯದ ಮೂಲಕ ಮಾಡಬೇಕು ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಾರ್ಯಕ್ರಮದಲ್ಲಿ ಸಸಿ ವಿತರಣೆ, ಬೀಜದ ಹುಂಡೆ ನೀಡಲಾಯಿತು. ನೀರಿನ ಸದ್ಬಳಕೆಯಾಗುವ ಮಳೆ ನೀರಿನ ಕೊಯ್ಲು ಯೋಜನೆಗೆ ಜನತೆ ಮನಸೋತರು.

For All Latest Updates

TAGGED:

ABOUT THE AUTHOR

...view details