ಕರ್ನಾಟಕ

karnataka

ETV Bharat / briefs

ಭಾವನಾತ್ಮಕ ಆಕರ್ಷಣೆಯಿಂದ್ಲೇ ಬಿಜೆಪಿ ಗದ್ದುಗೆ ಏರಿದೆ : ದಿನೇಶ್ ಗುಂಡೂರಾವ್ - ಬೆಂಗಳೂರು

ಬೆಂಗಳೂರಿನ ಮನೋರಾಯನ ಪಾಳ್ಯ ವಾರ್ಡ್​ನಲ್ಲಿ ಹಮ್ಮಿಕೊಂಡಿದ್ದ ರಂಜಾನ್​ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್ ಮಾತನಾಡಿದರು.

ದಿನೇಶ್​ ಗುಂಡೂರಾವ್

By

Published : Jun 1, 2019, 10:24 PM IST

ಬೆಂಗಳೂರು : ಕೆಲ ಭಾವನಾತ್ಮಕ ಆಕರ್ಷಣೆಗಳ ಮೂಲಕ ಇಂದು ಕೇಂದ್ರ ಸರ್ಕಾರ ರಚನೆಯಾಗಿದೆ. ಆದರೆ, ಕಾಂಗ್ರೆಸ್ ಯಾವತ್ತೂ ಮನುಷ್ಯತ್ವಕ್ಕೆ ಬೆಲೆ ಕೊಡುತ್ತದೆ. ಒಗ್ಗೂಡಿಸುವ ಕೆಲಸ ಮಾಡುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್ ಮಾತನಾಡುತ್ತಿರುವುದು
ಇಲ್ಲಿನ ಮನೋರಾಯನಪಾಳ್ಯ ವಾರ್ಡ್​ನಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪಾಲಿಕೆ ಸದಸ್ಯ ಅಬ್ದುಲ್ ವಾಜಿದ್ ನೇತೃತ್ವವಹಿಸಿದ್ದರು. 2500 ಮುಸ್ಲಿಂ ಸಮುದಾಯದವರಿಗೆ ಅಕ್ಕಿ, ಬೇಳೆ, ಅಡುಗೆ ಎಣ್ಣಿ ಮತ್ತು ಶಾವಿಗೆ ಸೇರಿ ದಿನ ಬಳಕೆ ಆಹಾರ ಪದಾರ್ಥಗಳ ಕಿಟ್​ಗಳನ್ನು ಮತ್ತು ಹಸಿ ಕಸ, ಒಣಕಸ ಸಂಗ್ರಹಕ್ಕೆ ಡಬ್ಬಿಗಳನ್ನು ವಿತರಿಸಲಾಯಿತು. ಕಾಂಗ್ರೆಸ್ 130 ವರ್ಷದ ಇತಿಹಾಸವಿರುವ ಪಕ್ಷ. ಸೋಲು-ಗೆಲುವು ಏನೇ ಬರಲಿ, ಸಿದ್ದಾಂತಗಳನ್ನು ಎಂದೂ ಮರೆತಿಲ್ಲ ಎಂದು ಹೇಳಿದರು. ಹೆಬ್ಬಾಳ ಶಾಸಕರಾದ ಬೈರತಿ ಸುರೇಶ್, ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್ ಇದ್ದರು.

ABOUT THE AUTHOR

...view details