ಕೊಪ್ಪಳ:ನಾಳೆ ಬೆಳಗ್ಗೆಯಿಂದ ಐದು ದಿನಗಳ ಕಾಲ ಕೊಪ್ಪಳ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ಡೌನ್ ಜಾರಿಯಾಗಲಿದ್ದು ಇಂದು ರಾತ್ರಿಯೇ ಪೊಲೀಸರು ಫೀಲ್ಡಿಗೆ ಇಳಿದಿದ್ದಾರೆ.
ನಾಳೆಯಿಂದ 5 ದಿನ ಕೊಪ್ಪಳ ಸಂಪೂರ್ಣ ಲಾಕ್... ಇಂದೇ ಫೀಲ್ಡಿಗಿಳಿದ ಪೊಲೀಸರು!! - ಐದು ದಿನಗಳ ಕಾಲ ಕೊಪ್ಪಳ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್
ನಾಳೆಯಿಂದ ಕೊಪ್ಪಳ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ಡೌನ್ ಜಾರಿಯಾಗಲಿದ್ದು, ಇಂದು ರಾತ್ರಿಯೇ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.
Koppal
ಅನಗತ್ಯವಾಗಿ ಓಡಾಡುತ್ತಿರುವ ವಾಹನಗಳ ತಪಾಸಣೆ ನಡೆಸಿ ಬೈಕ್ಗಳನ್ನು ಸೀಜ್ ಮಾಡುತ್ತಿದ್ದಾರೆ. ಡಿವೈಎಸ್ಪಿ ಗೀತಾ ಬೇವಿನಾಳ ಅವರು ರಸ್ತೆಗಳಿದು ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ನಗರದ ಅಶೋಕ ಸರ್ಕಲ್‌ನಲ್ಲಿ ನಗರ ಠಾಣೆಯ ಪಿಐ ಮಾರುತಿ ಗುಳ್ಳಾರಿ ಸೇರಿದಂತೆ ಪೊಲೀಸ್ ಅಧಿಕಾರಿ, ಸಿಬ್ಬಂದಿ ರಸ್ತೆಗಳಲ್ಲಿ ಅನಗತ್ಯವಾಗಿ ಓಡಾಡುತ್ತಿರುವ ಬೈಕ್ ಸವಾರರನ್ನು ತಡೆದು ಪರಿಶೀಲನೆ ನಡೆಸಿದರು.
ಅನಗತ್ಯವಾಗಿ ಓಡಾಡುತ್ತಿದ್ದ ಸುಮಾರು 20 ಬೈಕುಗಳನ್ನು ಪೊಲೀಸರು ಅಶೋಕ ಸರ್ಕಲ್‌ನಲ್ಲಿ ಸೀಜ್ ಮಾಡಿದ್ದಾರೆ.
Last Updated : May 16, 2021, 11:03 PM IST