ಪಾಟ್ನಾ: ಪದೇ ಪದೇ ಚೌಕಿದಾರ್ ಚೋರ್ ಹೈ ಎಂಬ ಪದ ಬಳಕೆ ಮಾಡಿದ್ದ ರಾಹುಲ್ ಗಾಂಧಿ ಮೊನ್ನೆ ಸುಪ್ರೀಂ ಕೋರ್ಟ್ನಲ್ಲಿ ವಿಷಾದ ವ್ಯಕ್ತಪಡಿಸಿ, ಈ ಪದ ಪುನರುಚ್ಚಾರ ಮಾಡುವುದಿಲ್ಲವೆಂದು ಹೇಳಿಕೆ ನೀಡಿದ್ದರು.
ಸುಪ್ರೀಂ ಎಚ್ಚರಿಕೆ ನಡುವೆಯೂ 'ಚೌಕಿದಾರ್ ಚೋರ್ ಹೈ' ಘೋಷಣೆ... ರಾಗಾ, ತೇಜಸ್ವಿನಿ ವಿರುದ್ಧ ದೂರು
ಚೌಕಿದಾರ್ ಚೋರ್ ಹೈ ಎಂಬ ಪದ ಬಳಕೆ ಮಾಡಿರುವುದಕ್ಕಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಹಾರದಲ್ಲಿ ದೂರು ದಾಖಲಾಗಿದೆ.
ಇದೀಗ ಬಿಹಾರದ ಸಮಸ್ತಿಪುರ್ದಲ್ಲಿ ತೇಜಸ್ವಿನಿ ಯಾದವ್ ಜತೆ ಸೇರಿ ಚುನಾವಣಾ ರ್ಯಾಲಿಯಲ್ಲಿ ಭಾಗಿಯಾಗಿದ್ದ ವೇಳೆ 'ಚೌಕಿದಾರ್ ಚೋರ್ ಹೈ' ಎಂದು ಘೋಷಣೆ ಕೂಗುವಂತೆ ಜನರನ್ನ ಪ್ರೇರೆಸಿದ ಆರೋಪದ ಮೇಲೆ ಬಿಹಾರದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಆರ್ಜೆಡಿ ಮುಖ್ಯಸ್ಥ ತೇಜಸ್ವಿನಿ ಯಾದವ್ ಜತೆ ಸೇರಿ ಪ್ರಚಾರ ನಡೆಸುತ್ತಿದ್ದ ವೇಳೆ ರಾಹುಲ್ ಗಾಂಧಿ, ಭಾಷಣದ ನಡುವೆ ಕೂಡ ಚೌಕಿದಾರ್ ಎಂಬ ಪದ ಬಳಕೆ ಮಾಡಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಹೀಗಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಆರ್ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಮೇಲೆ ನ್ಯಾಯಾಲಯದಲ್ಲಿ ವಕೀಲನೋರ್ವ ಪ್ರಕರಣ ದಾಖಲಿಸಿದ್ದಾರೆ.