ಕರ್ನಾಟಕ

karnataka

ETV Bharat / briefs

ರಂಭಾಪುರಿ ಪೀಠಕ್ಕೆ ಸಿಎಂ ಭೇಟಿ: ಬಜೆಟ್​ ಬಗ್ಗೆ ಹೇಳಿದ್ದಿಷ್ಟು! - chikkamagaluru political news

ಈ ಬಾರಿ ಉತ್ತಮ ಬಜೆಟ್ ಮಂಡಿಸಿದ್ದೇನೆ. ಕಾಫಿ ಬೆಳಗಾರರಿಗೆ ಅನುಕೂಲವಾಗಲು ಶೇ. 5 ಬಡ್ಡಿಯನ್ನು ಸರ್ಕಾರದ ವತಿಯಿಂದ ತುಂಬಿ ಕೊಡಲಾಗುತ್ತದೆ. ಈಗಾಗಲೇ ಚಿಕ್ಕಮಗಳೂರು ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರಾಗಿದ್ದು, ಈ ಭಾಗದಲ್ಲಿ ಗೊಂದಿ ನೀರಾವರಿ ಯೋಜನೆ ಜಾರಿಗಾಗಿ ಜನರ ಒತ್ತಾಯವಿದೆ. ಮುಂದಿನ ದಿನಗಳಲ್ಲಿ ಈ ಕೆಲಸವನ್ನೂ ಸಹ ಮಾಡಲಾಗುವುದು. ಏತ ನೀರಾವರಿ ಯೋಜನೆಗಾಗಿ 5,000 ಕೋಟಿ ರೂ. ಮೀಸಲಿರಿಸಲಾಗಿದೆ. ಈ ದುಡ್ಡಿನಲ್ಲಿಯೇ ಗೊಂದಿ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ಯಡಿಯೂರಪ್ಪ ಹೇಳಿದರು.

CM Yedyurappa visits Rambhapuri math
ರಂಭಾಪುರಿ ಪೀಠಕ್ಕೆ ಸಿಎಂ ಭೇಟಿ

By

Published : Mar 7, 2020, 2:42 PM IST

Updated : Mar 7, 2020, 4:54 PM IST

ಚಿಕ್ಕಮಗಳೂರು:ಜಿಲ್ಲೆಯ ಬಾಳೆಹೊನ್ನೂರಿನಲ್ಲಿರುವ ಶ್ರೀ ರಂಭಾಪುರಿ ಪೀಠಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದರು.

ಇಂದು ರಂಭಾಪುರಿ ಪೀಠದಲ್ಲಿ ಯುಗಮಾನೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿಎಂ ಬಾಳೆಹೊನ್ನೂರಿಗೆ ಆಗಮಿಸಿದ್ದರು. ಬಿಎಸ್​ವೈ ಮಠದ ಆವರಣಕ್ಕೆ ಆಗಮಿಸುತ್ತಿದ್ದಂತೆ ಮಠದ ಆಡಳಿತ ಮಂಡಳಿಯಿಂದ ಅವರಿಗೆ ಭವ್ಯ ಸ್ವಾಗತ ಕೊರಲಾಯಿತು. ನಂತರ ನೇರವಾಗಿ ವೀರಭದ್ರೇಶ್ವರ ದೇವಾಲಯಕ್ಕೆ ತೆರಳಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ವಿಶೇಷ ಪೂಜೆ ಸಲ್ಲಿಸಿದರು. ನಂತರ ರಂಭಾಪುರಿ ಶ್ರೀಗಳ ನಿವಾಸಕ್ಕೆ ತೆರಳಿದ ಬಿಎಸ್​ವೈ ಶ್ರೀಗಳ ಆಶೀರ್ವಾದ ಪಡೆದರು.

ರಂಭಾಪುರಿ ಪೀಠಕ್ಕೆ ಸಿಎಂ ಭೇಟಿ

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಬಾರಿ ಉತ್ತಮ ಬಜೆಟ್ ಮಂಡಿಸಿದ್ದೇನೆ. ಕಾಫಿ ಬೆಳಗಾರರಿಗೆ ಅನುಕೂಲವಾಗಲು ಶೇ. 5 ಬಡ್ಡಿಯನ್ನು ಸರ್ಕಾರದ ವತಿಯಿಂದ ತುಂಬಿ ಕೊಡಲಾಗುತ್ತದೆ. ಈಗಾಗಲೇ ಚಿಕ್ಕಮಗಳೂರು ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರಾಗಿದ್ದು, ಈ ಭಾಗದಲ್ಲಿ ಗೊಂದಿ ನೀರಾವರಿ ಯೋಜನೆ ಜಾರಿಗಾಗಿ ಜನರ ಒತ್ತಾಯವಿದೆ. ಮುಂದಿನ ದಿನಗಳಲ್ಲಿ ಈ ಕೆಲಸವನ್ನು ಸಹ ಮಾಡಲಾಗುವುದು. ಏತ ನೀರಾವರಿ ಯೋಜನೆಗಾಗಿ 5,000 ಕೋಟಿ ರೂ. ಮೀಸಲಿರಿಸಲಾಗಿದೆ. ಈ ದುಡ್ಡಿನಲ್ಲಿಯೇ ಗೊಂದಿ ಯೋಜನೆ ಜಾರಿ ಮಾಡಲಾಗುವುದು ಎಂದರು.

ಲೋಕಾಯುಕ್ತ ಜಾರಿಗೊಳಿಸುವ ವಿಚಾರವಾಗಿ ಮಾತನಾಡಿದ ಅವರು, ಲೋಕಾಯುಕ್ತ ಪ್ರಕರಣ ಕೋರ್ಟ್​ನಲ್ಲಿರುವುದರಿಂದ ತೀರ್ಪಿನ ಬಳಿಕ ರಾಜ್ಯದಲ್ಲಿ ಲೋಕಾಯುಕ್ತ ಕಾರ್ಯಾಚರಣೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

Last Updated : Mar 7, 2020, 4:54 PM IST

ABOUT THE AUTHOR

...view details