ರಾಮನಗರ: ಕರ್ನಾಟಕದಲ್ಲಿ ಮೊದಲನೇ ಹಂತದ ಲೋಕಸಭಾ ಚುನಾವಣೆ ಆರಂಭವಾಗಿದ್ದು, ಸಿಎಂ ಕುಮಾರಸ್ವಾಮಿ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ್ದಾರೆ.
ಲೋಕ ಸಮರ: ಕುಟುಂಬ ಸಮೇತರಾಗಿ ಮತದಾನ ಮಾಡಿದ ಸಿಎಂ ಹೆಚ್ಡಿಕೆ - ಬೆಂಗಳೂರು
ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ಕೇತಗಾನಹಳ್ಳಿಯಲ್ಲಿ ಸಿಎಂ ಹೆಚ್ಡಿಕೆ ಕುಟುಂಬ ಸಮೇತರಾಗಿ ಮತದಾನ ಮಾಡಿದರು.
ಕೇತಗಾನಹಳ್ಳಿಯಲ್ಲಿ ಮತದಾನ ಮಾಡಿ ಮಾಧ್ಯಮದೊಂದಿಗೆ ಮತನಾಡಿದ ಸಿಎಂ, ಮತದಾನ ಎಲ್ಲರ ಹಕ್ಕು. ತಪ್ಪದೇ ಮತ ಚಲಾಯಿಸಿ ಎಂದು ಕರೆ ಕೊಟ್ಟರು. ಕರ್ನಾಟಕದಲ್ಲಿ ಮೋದಿ ಹೆಸರನ್ನು ಮರೆಯುವಂತೆ ಮಂಡ್ಯ ಜಿಲ್ಲೆಯನ್ನು ಹೈಲೈಟ್ ಮಾಡಿರುವುದಕ್ಕೆ ಧನ್ಯವಾದ. ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲುವು ನಿಶ್ಚಿತ ಎನ್ನುವ ವಿಶ್ವಾಸವನ್ನು ಸಿಎಂ ವ್ಯಕ್ತಪಡಿಸಿದರು.
ಆ ಬಳಿಕ ಮಾತನಾಡಿದ ಮಂಡ್ಯ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ, ಮಂಡ್ಯದ ಎಂಟು ತಾಲೂಕಿಗೆ ಇಂದು ಭೇಟಿ ಕೊಡಲಿದ್ದೇನೆ. ಮಂಡ್ಯ ಚುನಾವಣೆ ಬಗ್ಗೆ ಮಾಧ್ಯಮಗಳು ತುಂಬಾ ಹೈಪ್ ಕ್ರಿಯೇಟ್ ಮಾಡಿದಿರುವುದಕ್ಕೆ ಮಾಧ್ಯಮಗಳಿಗೆ ಧನ್ಯವಾದ ತಿಳಿಸಿದರು.