ಮುಂಬೈ:ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಎನಿಮಲ್ಸ್ (ಪೆಟಾ) ಸಂಸ್ಥೆಯ ನಿರಂತರ ಪ್ರಯತ್ನದಿಂದಾಗಿ ಜಾಗತಿಕ ಪ್ರವಾಸಿ ತಾಣಗಳ ಸಂಸ್ಥೆ ಕ್ಲಿಯರ್ ಟ್ರಿಪ್ ಪ್ರಾಣಿಗಳ ಸಫಾರಿ ಸೇವೆಗಳನ್ನು ತಕ್ಷಣವೇ ನಿಲ್ಲಿಸಿದ್ದು, ತಾನು ಒಡಂಬಡಿಕೆ ಮಾಡಿಕೊಂಡ ಸೇವಾ ಪೂರೈಕೆದಾರರನ್ನು ಕೈಬಿಟ್ಟಿದೆ.
ಪೆಟಾ ನಿರಂತರ ಯತ್ನ... ಆನೆ, ಒಂಟೆ ಸಫಾರಿ ಕೈ ಬಿಟ್ಟ ಕ್ಲಿಯರ್ ಟ್ರಿಪ್
ಆನೆ, ಒಂಟೆ, ಕದುರೆ ಮೊದಲಾದ ಪ್ರಾಣಿಗಳ ಮೇಲೆ ಸವಾರಿ ಮಾಡಿಸುವ ಸೇವೆಯನ್ನು ಪ್ರವಾಸ ಪ್ಯಾಕೇಜ್ನಲ್ಲಿ ಸೇರಿಸುವುದು ಸರಿಯಲ್ಲ. ಈ ಮೂಲಕ ಕ್ಲಿಯರ್ ಟ್ರಿಪ್ ಸಂಸ್ಥೆಯೇ ಪ್ರಾಣಿಗಳ ಸವಾರಿಯನ್ನು ಪ್ರೋತ್ಸಾಹಿಸುತ್ತಿದೆ ಎಂದು ಪೆಟಾ ಇಂಡಿಯಾ ನಿರಂತರ ಪತ್ರ ಬರೆಯುತ್ತಿತ್ತು.

ಕ್ಲಿಯರ್ ಟ್ರಿಪ್ ಒದಗಿಸುತ್ತಿರುವ ಈ ಸೇವೆಯು ಪ್ರಾಣಿ ದಯಾ ಕಾನೂನುಗಳನ್ನು ಮೀರಿವೆ ಎಂದು ಪೆಟಾ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಸಂಸ್ಥೆಯು ತಾನು ಒಡಂಬಡಿಕೆ ಮಾಡಿಕೊಂಡಿದ್ದ ಸೇವಾ ಪೂರೈಕೆದಾರರನ್ನು ಕೈಬಿಟ್ಟಿದ್ದು, ತಾನು ಇನ್ನು ಮುಂದೆ ಪ್ರಾಣಿಗಳ ಸಫಾರಿಯನ್ನು ಪ್ರೋತ್ಸಾಹಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿರುವುದಾಗಿ ಪೆಟಾ ಇಂಡಿಯಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.