ಕರ್ನಾಟಕ

karnataka

ETV Bharat / briefs

ಪುರುಷರ ಕ್ರಿಕೆಟ್​ ಪಂದ್ಯಕ್ಕೆ ಮಹಿಳೆ ಅಂಪೈರ್​​! ಕ್ಲೈರ್​ ಪೊಲೊಸಾಕ್ ಇತಿಹಾಸ ಸೃಷ್ಟಿ - ಮಹಿಳಾ ಅಂಪೈರ್

ವಿಶ್ವ ಕ್ರಿಕೆಟ್​ ಲೀಗ್​ನ ಡಿವಿಷನ್​​ 2 ನ ಓಮನ್​ ಮತ್ತು ನಮೀಬಿಯಾ ನಡುವಿನ ಫೈನಲ್‌ ಪಂದ್ಯಕ್ಕೆ ಕ್ಲೈರ್‌ ಪೊಲೊಸಾಕ್‌ ಅಂಪೈರ್​ ಆಗಿ ಕಾರ್ಯನಿರ್ವಹಿಸಿದ್ದಾರೆ.

ಕ್ಲೈರ್​ ಪೊಲೊಸಾಕ್

By

Published : Apr 27, 2019, 4:59 PM IST

ದುಬೈ: ಅಂತಾರಾಷ್ಟ್ರೀಯ ಪುರುಷರ ಕ್ರಿಕೆಟ್​ ಪಂದ್ಯಕ್ಕೆ ಅಂಪೈರ್​ ಆಗಿ ಕಾರ್ಯನಿರ್ವಹಿಸುವ ಮೂಲಕ ಕ್ಲೈರ್​ ಪೊಲೊಸಾಕ್ ಹೊಸ ದಾಖಲೆ ಬರೆದಿದ್ದಾರೆ. ಈ ಮೂಲಕ ಪುರುಷರ ಕ್ರಿಕೆಟ್‌ಗೆ ಅಂಪೈರಿಂಗ್ ಮಾಡಿದ ಮೊದಲ ಮಹಿಳೆ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಕ್ಲೈರ್​ ಪೊಲೊಸಾಕ್

ವಿಶ್ವ ಕ್ರಿಕೆಟ್​ ಲೀಗ್​ನ ಡಿವಿಷನ್​​ 2- ಓಮನ್​ ಮತ್ತು ನಮೀಬಿಯಾ ತಂಡಗಳ ನಡುವಿನ ಫೈನಲ್‌ ಪಂದ್ಯಕ್ಕೆ ಕ್ಲೈರ್‌ ಪೊಲೊಸಾಕ್‌ ಅಂಪೈರ್​ ಆಗಿ ಕಾರ್ಯನಿರ್ವಹಿಸಿದ್ದಾರೆ.

ಕ್ಲೈರ್​ ಪೊಲೊಸಾಕ್

ಈಗಾಗಲೇ ಮಹಿಳಾ ಕ್ರಿಕೆಟ್​ನಲ್ಲಿ ಅಂಪೈರ್​ ಆಗಿ ಕಾರ್ಯನಿರ್ವಹಿಸಿರುವ ಕ್ಲೈರ್​, ಕಳೆದ ವರ್ಷ ಭಾರತ ಹಾಗೂ ಇಂಗ್ಲೆಂಡ್​ ನಡುವೆ ನಡೆದ ಟಿ-20 ವಿಶ್ವಕಪ್​ನ ಸೆಮಿಫೈನಲ್​​ನಲ್ಲೂ ಅಂಪೈರ್​ ಆಗಿದ್ದರು. ಜತೆಗೆ 2017ರಲ್ಲಿ ಆಸ್ಟ್ರೇಲಿಯಾದ ದೇಶೀಯ ಕ್ರಿಕೆಟ್​ ಪಂದ್ಯಗಳಲ್ಲಿ ಅಂಪೈರ್​ ಆಗಿಯೂ ಇವರು ಸೇವೆ ಸಲ್ಲಿಸಿದ್ದಾರೆ.

ABOUT THE AUTHOR

...view details