ಕರ್ನಾಟಕ

karnataka

ETV Bharat / briefs

ನ್ಯಾಯಾಂಗ ಇತಿಹಾಸದಲ್ಲಿ ಇದೇ ಮೊದಲು... ವಿಚಾರಣಾ ಸಮಿತಿ ಮುಂದೆ ಸಿಜೆಐ ಹಾಜರು?

ಈ ಸಮಿತಿ ಮುಂದೆ ಮುಖ್ಯ ನ್ಯಾಯಮೂರ್ತಿಗಳು ಹಾಜರಾಗುವಂತೆ ಕೋರಿಕೆ ಸಲ್ಲಿಕೆ ಮಾಡಿದೆ. ಈ  ನೋಟಿಸ್​ಗೆ ಸಿಜೆಐ ಸ್ಪಂದಿಸಿದ್ದು, ಸಮಿತಿ ಮುಂದೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸುವುದಾಗಿ ಹೇಳಿದ್ದಾರೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.

ಸಿಜೆಐ

By

Published : May 2, 2019, 10:15 AM IST

ನವದೆಹಲಿ:ಇದು ನ್ಯಾಯಾಂಗ ಇತಿಹಾಸದಲ್ಲೇ ಅಪರೂಪದ ಬೆಳವಣಿಗೆ. ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ನ್ಯಾಯಾಂಗ ಇಲಾಖೆ ಸಿಬ್ಬಂದಿಯೊಬ್ಬರು ಮಾಡಿದ್ದ ಲೈಂಗಿಕ ಕಿರುಕುಳ ಆರೋಪದ ತನಿಖೆಯನ್ನ ನ್ಯಾ.ಬೊಬ್ಡೆ ಸಮಿತಿ ಮಾಡುತ್ತಿದೆ.

ಈ ಸಮಿತಿ ಮುಂದೆ ಮುಖ್ಯ ನ್ಯಾಯಮೂರ್ತಿಗಳು ಹಾಜರಾಗುವಂತೆ ಕೋರಿಕೆ ಸಲ್ಲಿಕೆ ಮಾಡಿದೆ. ಈ ನೋಟಿಸ್​ಗೆ ಸಿಜೆಐ ಸ್ಪಂದಿಸಿದ್ದು, ಸಮಿತಿ ಮುಂದೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸುವುದಾಗಿ ಹೇಳಿದ್ದಾರೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.

ಈ ನಡುವೆ, ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಆರೋಪ ಮಾಡಿದ್ದ ಮಹಿಳೆ, ಸುಪ್ರೀಂಕೋರ್ಟ್​ ರಚನೆ ಮಾಡಿರುವ ಮೂವರು ನ್ಯಾಯಮೂರ್ತಿಗಳ ಸಮಿತಿ ಮುಂದೆ ಹಾಜರಾಗಲು ನಿರಾಕರಿಸಿದ್ದಾರೆ. ಸಮಿತಿಯಿಂದ ತಮಗೆ ನ್ಯಾಯ ಸಿಗುವ ಲಕ್ಷಣಗಳು ಇಲ್ಲದಿರುವುದರಿಂದ ಈ ಕ್ರಮ ಕೈಗೊಂಡಿರುವುದಾಗಿ ವರದಿಗಳು ಹೇಳಿದ್ದವು.

ABOUT THE AUTHOR

...view details