ಕರ್ನಾಟಕ

karnataka

ETV Bharat / briefs

ನಾರ್ಟ್ಜೆ ಬದಲಿಗೆ ಆಲ್​ರೌಂಡರ್​ಗೆ ಮಣೆ ಹಾಕಿದ ಆಫ್ರಿಕಾ... ವಿಶ್ವಕಪ್​ಗೆ ಕ್ರಿಸ್​ ಮೊರಿಸ್​! - ಜೋಹಾನ್ಸ್‌ಬರ್ಗ್

ನೆಟ್​ನಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಬಲಗೈ ಹೆಬ್ಬೆರಳಿಗೆ ನಾರ್ಟ್ಜೆ ಗಾಯಮಾಡಿಕೊಂಡಿದ್ದು, ಹೀಗಾಗಿ ಮುಂದಿನ 6ರಿಂದ 8 ವಾರಗಳ ಕಾಲ ಅವರಿಗೆ ವಿಶ್ರಾಂತಿ ಅಗತ್ಯವಾಗಿದೆ ಎಂದು ತಿಳಿದು ಬಂದಿದೆ.

ವಿಶ್ವಕಪ್​ಗೆ ಕ್ರಿಸ್​ ಮೊರಿಸ್

By

Published : May 8, 2019, 4:24 AM IST

ಜೋಹಾನ್ಸ್‌ಬರ್ಗ್: ಬಲಗೈ ಹೆಬ್ಬೆರಳು ಮುರಿದ ಕಾರಣ ವಿಶ್ವಕಪ್​​ನಿಂದ ಹೊರಬಿದ್ದಿರುವ ದಕ್ಷಿಣ ಆಫ್ರಿಕಾದ ವೇಗದ ಬೌಲರ್​ ಅನ್ರಿಚ್ ನಾರ್ಟ್ಜೆ ಸ್ಥಾನಕ್ಕೆ ಆಲ್​ರೌಂಡರ್​ ಆಯ್ಕೆಯಾಗಿದ್ದಾರೆ.

ನೆಟ್​ನಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಬಲಗೈ ಹೆಬ್ಬೆರಳಿಗೆ ನಾರ್ಟ್ಜೆ ಗಾಯಮಾಡಿಕೊಂಡಿದ್ದು, ಹೀಗಾಗಿ ಮುಂದಿನ 6ರಿಂದ 8 ವಾರಗಳ ಕಾಲ ಅವರಿಗೆ ವಿಶ್ರಾಂತಿ ಅಗತ್ಯವಾಗಿದೆ ಎಂದು ತಿಳಿದು ಬಂದಿದೆ.

ಹೀಗಾಗಿ ಅವರ ಸ್ಥಾನಕ್ಕೆ ಕ್ರಿಸ್​ ಮೊರಿಸ್​ ಆಯ್ಕೆಯಾಗಿದ್ದಾರೆ. 32ರ ಹರೆಯದ ಮೊರಿಸ್ 2018ರ ಫೆಬ್ರವರಿಯಲ್ಲಿ ಕೊನೆಯ ಬಾರಿ ಏಕದಿನ ಪಂದ್ಯ ಆಡಿದ್ದರು. ಸದ್ಯ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಮೊರಿಸ್ ಡೆಲ್ಲಿ ತಂಡದ ಪರ ಆಡುತ್ತಿದ್ದಾರೆ.

ದಕ್ಷಿಣ ಆಫ್ರಿಕಾ ಮೇ 24 ಹಾಗೂ 26ರಂದು ಕ್ರಮವಾಗಿ ಶ್ರೀಲಂಕಾ ಹಾಗೂ ವೆಸ್ಟ್‌ಇಂಡೀಸ್‌ನ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲಿದೆ. ಮೇ 30 ರಂದು ದಿ ಓವಲ್‌ನಲ್ಲಿ ಇಂಗ್ಲೆಂಡ್ ಎದುರು ಆಡುವುದರೊಂದಿಗೆ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.

ABOUT THE AUTHOR

...view details