ಕರ್ನಾಟಕ

karnataka

ETV Bharat / briefs

ಚೀನಾದಲ್ಲಿ 100 ಕ್ಕೂ ಹೆಚ್ಚು ಲಕ್ಷಣರಹಿತ ಕೋವಿಡ್-19 ಪ್ರಕರಣಗಳು ಪತ್ತೆ - ಚೀನಾ ಕೊರೊನಾ ನ್ಯೂಸ್

ದಿನದಿಂದ ದಿನಕ್ಕೆ ಚೀನಾದಲ್ಲಿ ಲಕ್ಷಣರಹಿತ ಕೋವಿಡ್-19 ಪ್ರಕರಣಗಳು ಪತ್ತೆಯಾಗುತ್ತಿದ್ದು, ನಿನ್ನೆ 100 ಕ್ಕೂ ಹೆಚ್ಚು ಲಕ್ಷಣರಹಿತ ಕೋವಿಡ್-19 ಪ್ರಕರಣಗಳು ವರದಿಯಾಗಿವೆ.

Corona
Corona

By

Published : Oct 26, 2020, 2:49 PM IST

ಚೀನಾ: ಮಹಾಮಾರಿ ಕೊರೊನಾಗೆ ಇಡೀ ಜಗತ್ತು ತತ್ತರಿಸಿ ಹೋಗಿದೆ. ಚೀನಾದ ಕಾಶ್ಗರ್ ನಗರದಲ್ಲಿ ನಿನ್ನೆ 100 ಕ್ಕೂ ಹೆಚ್ಚು ಲಕ್ಷಣರಹಿತ ಕೋವಿಡ್-19 ಪ್ರಕರಣಗಳು ವರದಿಯಾಗಿವೆ ಎಂದು ಪ್ರಾದೇಶಿಕ ಆರೋಗ್ಯ ಪ್ರಾಧಿಕಾರ ತಿಳಿಸಿದೆ.

ಕ್ಸಿನ್‌ಜಿಯಾಂಗ್ ಆರೋಗ್ಯ ಸಮಿತಿಯ ಉಪ ಮುಖ್ಯಸ್ಥ ಗು ಯಿಂಗ್ಸು ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ನಿನ್ನೆ ಪತ್ತೆಯಾದ 137 ಹೊಸ ಪ್ರಕರಣಗಳು ಶುಫು ಕೌಂಟಿಯದ ಕೊರೊನಾ ಸೋಂಕಿತ ಬಾಲಕಿಯೋರ್ವಳ ಸಂಪರ್ಕದಿಂದ ದೃಢಪಟ್ಟಿದೆ ಎಂದು ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ ಎಂದರು.

ಕೊರೊನಾ ಸೋಂಕಿತ ಬಾಲಕಿ ಬಟ್ಟೆ ತಯಾರಿಸುವ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಕಾರ್ಖಾನೆಯ ಇತರೆ 831 ಕಾರ್ಮಿಕರನ್ನು ಪರೀಕ್ಷಿಗೆ ಒಳಪಡಿಸಲಾಗಿದೆ. ಇನ್ನು ನಿನ್ನೆ ಮಧ್ಯಾಹ್ನದ ವೇಳೆಗೆ 2.8 ದಶಲಕ್ಷ ಜನರ ಮಾದರಿಯನ್ನು ಸಂಗ್ರಹಿಸಲಾಗಿದೆ ಎಂದು ಹೇಳಿದರು.

ಇನ್ನು ಮೇಲ್ನೋಟಕ್ಕೆ ಯಾವುದೇ ರೋಗದ ಲಕ್ಷಣಗಳಿಲ್ಲದಿದ್ದರು ಸಹ ಆತನಲ್ಲಿ ಸೋಂಕು ಕಂಡುಬಂದರೆ ಆ ವ್ಯಕ್ತಿಯನ್ನು ಲಕ್ಷಣರಹಿತ ಕೊರೊನಾ ಪೀಡಿತ ಎಂದು ಕರೆಯಲಾಗುತ್ತದೆ.

ABOUT THE AUTHOR

...view details