ನವದೆಹಲಿ:ವಿಶ್ವದಲ್ಲಿ ರಕ್ಷಣೆಗಾಗಿ ಅಮೆರಿಕ ಸರಿ ಸುಮಾರು 45 ಲಕ್ಷ ಕೋಟಿ ರೂ. ವೆಚ್ಚ ಮಾಡುತ್ತಿದೆ. ಅಮೆರಿಕ ಹೊರೆತು ಪಡಿಸಿದರೆ ಚೀನಾ ಸರಿ ಸುಮಾರು 17 ಲಕ್ಷ ಕೋಟಿ ರೂ.ಗಳನ್ನ ಮಿಲಿಟರಿಗಾಗಿ ವಿನಿಯೋಗಿಸುತ್ತಿದೆ. ಇವೆರಡು ರಾಷ್ಟ್ರಗಳ ರಕ್ಷಣಾ ವೆಚ್ಚವೇ ಸಣ್ಣ ರಾಷ್ಟ್ರ್ಳಗಳ ಒಟ್ಟಾರೆ ಆದಾಯಕ್ಕೆ ಸಮ.
ಅಮೆರಿಕ, ಚೀನಾ ಬಳಿಕ ಅತಿ ಹೆಚ್ಚು ವೆಚ್ಚ ಮಾಡುವ ರಾಷ್ಟ್ರ ಎಂದರೆ ಅದು ಸೌದಿ ಅರೆಬಿಯಾ, ಈ ರಾಷ್ಟ್ರ ಸುಮಾರು 4.72 ಲಕ್ಷ ಕೋಟಿಯನ್ನ ದೇಶದ ಭದ್ರತೆಗಾಗಿ ಉಪಯೋಗಿಸುತ್ತಿದೆ. ಅದನ್ನು ಹೊರತುಪಡಿಸಿದರೆ, ಭಾರತವೇ ದೇಶದ ರಕ್ಷಣೆಗಾಗಿ ಬರೋಬ್ಬರಿ 4ಲಕ್ಷದ 64 ಸಾವಿರ ಕೋಟಿ ರೂ. ಗಳನ್ನ ಖರ್ಚು ಮಾಡುತ್ತಿದೆ.
ಈ ಸಂಬಂಧ ಜಾಗತಿಕ ಟಿಂಜ್ ಟ್ಯಾಂಕ್ ಎಂದು ಕರೆಯಿಸಿಕೊಳ್ಳುವ ಇಂಟರ್ನ್ಯಾಷನಲ್ ರಿಸರ್ಚ್ ಇನ್ಸಿಟ್ತೂಟ್ ( SIPRI) ವರದಿ ತಯಾರಿಸಿದ್ದು, ವಿಶ್ವದ ಮಿಲಿಟರಿ ವೆಚ್ಚು ಸುಮಾರು ಶೇ 2.6 ರಷ್ಟು ಹೆಚ್ಚಳವಾಗಿದ್ದು, 1,822 ಬಿಲಿಯನ್ ಡಾಲರ್ಗೆ ( 127 ಲಕ್ಷ ಕೋಟಿ ರೂ) ತಲುಪಿದೆ ಎಂದು ಹೇಳಿದೆ. ಅಂದ ಹಾಗೆ ಇದು 2018ರ ವರದಿಯಾಗಿದೆ.