ನವದೆಹಲಿ:ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೇಲೆ ವ್ಯಕ್ತಿಯೋರ್ವ ಹಲ್ಲೆ ಮಾಡಿದ್ದಾನೆ.
ಕೇಜ್ರಿವಾಲ್‌ಗೆ ಮತ್ತೆ ಕಪಾಳಮೋಕ್ಷ: ರೋಡ್ ಶೋ ವೇಳೆ ಹಲ್ಲೆ! - ಲೋಕಸಭಾ ಚುನಾವಣೆ
ರೋಡ್ ಶೋ ನಡೆಸುತ್ತಿದ್ದ ವೇಳೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ಗೆ ವ್ಯಕ್ತಿಯೋರ್ವ ಕಪಾಳಮೋಕ್ಷ ಮಾಡಿದ್ದಾನೆ.
ಕಪಾಳಮೋಕ್ಷ
ಎಎಪಿ ಅಭ್ಯರ್ಥಿ ಬ್ರಿಜೇಶ್ ಗೋಯಲ್ ಪರ ಪ್ರಚಾರ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ. ತೆರೆದ ವಾಹನದ ಮೇಲೆ ಪ್ರಚಾರ ನಡೆಸುತ್ತಿದ್ದಾದ ಏಕಾಏಕಿ ನುಗ್ಗಿ ಬಂದ ವ್ಯಕ್ತಿ, ಕೇಜ್ರಿವಾಲ್ ಕೆನ್ನೆಗೆ ಬಾರಿಸಿದ್ದಾನೆ.
5ನೇ ಹಂತದ ಚುನಾವಣೆ 7ನೇ ತಾರೀಖಿನಂದು ನಡೆಯಲಿದ್ದು, ಅದಕ್ಕಾಗಿ ಕೊನೆಯ ದಿನದ ಮತಪ್ರಚಾರದಲ್ಲಿಅವರು ಭಾಗಿಯಾಗಿದ್ದರು.
ಈ ಹಿಂದೆ ಕೂಡ ಕೇಜ್ರಿವಾಲ್ ಮೇಲೆ ಹಲ್ಲೆ ನಡೆದಿರುವ ಪ್ರಕರಣಗಳು ವರದಿಯಾಗಿದ್ದವು.