ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಕೋಳಿ ಫಾರಂ ನೆಲಸಮವಾಗಿ ಲಕ್ಷಾಂತರ ರೂ. ನಷ್ಟವಾಗಿದೆ.
ಗಾಳಿ-ಮಳೆಗೆ ಕೋಳಿ ಫಾರಂ ನೆಲಸಮ... ಸಾವಿರಾರು ಕೋಳಿ ಸಾವು - kannada news
ಉತ್ತರ ಕನ್ನಡದ ಜಿಲ್ಲೆಯಾದ್ಯಂತ ಬಿರುಗಾಳಿ ಸಹಿತ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಅಲ್ಲಲ್ಲಿ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಗಾಳಿ ಮಳೆಗೆ ಕೋಳಿ ಫಾರಂ ನೆಲಸಮ, ಸಾವಿರಾರು ಕೋಳಿ ಸಾವು
ಗುಡುಗು ಸಹಿತ ಬಂದ ಗಾಳಿ ಮಳೆಗೆ ಕೋಳಿ ಫಾರ್ಮ್ ಕುಸಿದು ಬಿದ್ದ ಪರಿಣಾಮ ಮುಂಡಗೋಡದ ಹಜರತ್ ಅಲಿ ಎನ್ನುವವರಿಗೆ ಸೇರಿದ ಕೋಳಿ ಫಾರ್ಮ್ ನೆಲಸಮವಾಗಿದ್ದು, ಕೋಳಿ ಮರಿಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಸುಮಾರು 5000ಕ್ಕೂ ಹೆಚ್ಚು ಕೋಳಿಗಳು ಸತ್ತಿದ್ದು, ಸುಮಾರು 15 ಲಕ್ಷ ರೂ. ನಷ್ಟ ಸಂಭವಿಸಿದೆ ಎನ್ನಲಾಗಿದೆ.