ಹುಬ್ಬಳ್ಳಿ:ಬೀದಿ ಬೀದಿಯಲ್ಲಿ ಶಾಲಾ ಹಾಗೂ ಕಾಲೇಜು ಯುವತಿಯರನ್ನು ಚುಡಾಯಿಸುವುದೇ ಕಾಯಕ ಮಾಡಿಕೊಂಡಿದ್ದ ಕಿರಾತಕರಿಗೆ ಪೊಲೀಸರು ತಕ್ಕ ಶಾಸ್ತಿ ಮಾಡಿದ್ದಾರೆ. ದಿನನಿತ್ಯ ಬೆಳಗಾದರೆ ಸಾಕು ಬೀದಿ ಬದಿಯಲ್ಲಿ ಯುವತಿಯರಿಗೆ ಕಾಟ ಕೊಡುತ್ತಿದ್ದ ಎಂಟು ಮಂದಿ ರೋಡ್ ರೋಮಿಯೋಗಳನ್ನು ಬೆಂಡಿಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಯುವತಿಯರಿಗೆ ಕಾಟ... ರೋಡ್ ರೋಮಿಯೋಗಳ ಹೆಡೆಮುರಿ ಕಟ್ಟಿದ ಚೆನ್ನಮ್ಮ ಪಡೆ - ladies force
ದಿನನಿತ್ಯ ಬೆಳಗಾದರೆ ಸಾಕು ಬೀದಿ ಬದಿಯಲ್ಲಿ ಯುವತಿಯರಿಗೆ ಕಾಟ ಕೊಡುತ್ತಿದ್ದ ಎಂಟು ಮಂದಿ ರೋಡ್ ರೋಮಿಯೋಗಳನ್ನು ಬೆಂಡಿಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರೋಡ್ ರೋಮಿಯೋಗಳು
ಪ್ರತಿದಿನ ಮಂಟೂರು ರಸ್ತೆ, ಘಂಟಿಕೇರಿ ಓಣಿ ನೆಹರೂ ಕಾಲೇಜು, ವೀರಾಪುರ ಓಣಿ ಸೆಟ್ಲ್ಮೆಂಟ್ ಹತ್ತಿರ ಹುಡುಗಿಯರನ್ನು ಚುಡಾಯಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ಮಾಡಿದ ಚೆನ್ನಮ್ಮ ಪಡೆಯ ಮಹಿಳಾ ಪೊಲೀಸರು ಬೀದಿ ಕಾಮಣ್ಣರನ್ನು ಬಂಧಿಸಿದ್ದಾರೆ.
ಬಂಧಿತರು ತನ್ವಿರ್ ಶಕೀಲ್, ಆರೀಫ್ ಮುಲ್ಲಾ, ತೌಸೀಫ್ ಕುಂದಗೋಳ, ಸಮೀರ್ ಅರಳಿಕಟ್ಟಿ, ಉಮರ್ ಬೇಪಾರಿ, ಉಸ್ಮಾನ ಕರಡಿ ಹಾಗೂ ಉಮರ್ ಫಾರುಕ್ ಕರ್ಜಗಿ ಎಂಬುವರಾಗಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.