ಹೈದರಾಬಾದ್: ಧೋನಿ ನಾಯಕತ್ವದ ಸಿಎಸ್ಕೆ ತಂಡ ಬುಧವಾರ ಹೈದರಾಬಾದ್ನಲ್ಲಿ ಸನ್ರೈಸರ್ಸ್ ತಂಡವನ್ನು ಎದುರಿಸಲಿದೆ.
ಟಾಸ್ ಗೆದ್ದರೂ ಎರಡು ಪಂದ್ಯ ಕಳೆದುಕೊಂಡಿರುವ ಹೈದರಾಬಾದ್ ತಂಡ ಕಡಿಮೆ ಮೊತ್ತವನ್ನು ಚೇಸ್ ಮಾಡಲಾಗದೆ ಸೋಲನ್ನೊಪ್ಪಿಕೊಂಡಿದೆ. ಹೈದರಾಬಾದ್ ವಾರ್ನರ್ ಹಾಗೂ ಬ್ಯಾರ್ಸ್ಟೋವ್ ಅವರ ಮೇಲೆ ಹೆಚ್ಚು ಅವಲಂಬಿತವಾಗಿದ್ದು ಅವರಿಬ್ಬರು ವಿಫಲರಾದರೆ ಪಂದ್ಯ ಸೋಲುಕಾಣುತ್ತಿದೆ.
ಮನೀಷ್ ಪಾಂಡೆ, ದೀಪಕ್ ಹೂಡಾ, ಯೂಸುಫ್ ಪಠಾಣ್, ವಿಜಯ್ ಶಂಕರ್, ಮೊಹಮದ್ ನಬಿ ಸೇರಿದಂತೆ ಮಧ್ಯಮ ಕ್ರಮಾಂಕ ಸಂಪೂರ್ಣ ವಿಫಲವಾಗುತ್ತಿದೆ. ಏನೇ ಪ್ರಯೋಗ ಮಾಡಿದರೂ ಹೈದರಾಬಾದ್ಗೆ ಗೆಲುವು ಮರೀಚಿಕೆಯಾಗಿದೆ.
ಮುಂಬೈ ವಿರುದ್ಧ 137 ರನ್ ಚೇಸ್ ಮಾಡಲಾಗದೆ 96ಕ್ಕೆ, ಡೆಲ್ಲಿ ವಿರುದ್ಧ 156 ರನ್ ಚೇಸ್ ಮಾಡಲಾಗದೆ 116ಕ್ಕೆ ಆಲೌಟ್ ಆಗುವ ಮೂಲಕ ಹೀನಾಯ ಸೋಲುಕಂಡಿದೆ. ಇಂದಿನ ಪಂದ್ಯದಲ್ಲಿ ಬಲಿಷ್ಠ ಬೌಲಿಂಗ್ ಪಡೆ ಹೊಂದಿರುವ ಸಿಎಸ್ಕೆ ವಿರುದ್ದ ಕಣಕ್ಕಿಳಿಯುತ್ತಿದ್ದು, ಮಧ್ಯಮ ಕ್ರಮಾಂಕದ ಆಟಗಾರರು ತಪ್ಪನ್ನು ತಿದ್ದಿಕೊಳ್ಳದಿದ್ದರೆ ಇಂದಿನ ಪಂದ್ಯದಲ್ಲೂ ಸೋಲು ಕಾಣಬೇಕಾಗುತ್ತದೆ.
ಇನ್ನು ಚೆನ್ನೈ ಆಡಿರುವ 8 ಪಂದ್ಯಗಳಲ್ಲಿ 7ರಲ್ಲಿ ಜಯ ಸಾಧಿಸಿದೆ. ಇಂದಿನ ಪಂದ್ಯ ಗೆದ್ದರೆ ಇನ್ನು 4-5 ಪಂದ್ಯಗಳಿರುವ ಮುನ್ನವೇ ಪ್ಲೇ ಆಫ್ ಖಚಿತಪಡಿಸಿಕೊಳ್ಳಲಿದೆ. ಸಿಎಸ್ಕೆ ಬಹುತೇಕ ಹಿಂದಿನ ಪಂದ್ಯದಲ್ಲಿ ಆಡಿರುವ ತಂಡವನ್ನೇ ಕಣಕ್ಕಿಸಿಸುವ ಸಾಧ್ಯತೆಯಿದೆ.
ಮುಖಾಮುಖಿ: