ಮೈಸೂರು: ಹೆಚ್.ಡಿ.ಕೋಟೆ ತಾಲೂಕಿನ ಹಾರುಪುರ ಗ್ರಾಮದ ಹೊರವಲಯದಲ್ಲಿ ಪ್ರತ್ಯಕ್ಷಗೊಂಡು ಜನರಲ್ಲಿ ಭೀತಿ ಉಂಟುಮಾಡಿದ್ದ ಗಂಡು ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ.
ಬೋನಿಗೆ ಬಿದ್ದ ಗಂಡು ಚಿರತೆ.. ನಿಟ್ಟುಸಿರು ಬಿಟ್ಟ ಗ್ರಾಮಸ್ಥರು - ಬೋನು, ಗಂಡು ಚಿರತೆ, ನಿಟ್ಟುಸಿರು, ಗ್ರಾಮಸ್ಥರು
ಹಾರುಪುರ ಗ್ರಾಮದ ಹೊರವಲಯದಲ್ಲಿ ಪ್ರತ್ಯಕ್ಷಗೊಂಡು ಜನರಲ್ಲಿ ಭೀತಿ ಉಂಟುಮಾಡಿದ್ದ ಗಂಡು ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ.
ಚಿರತೆ
ಹಾರುಪುರ ಗ್ರಾಮದ ಆಸುಪಾಸಿನಲ್ಲಿ ಪ್ರತ್ಯಕ್ಷಗೊಂಡು ಜನರಲ್ಲಿ ಭಯಮೂಡಿಸಿದ್ದ ಚಿರತೆಯನ್ನು ಸೆರೆಹಿಡಿಯುವಂತೆ ಕಳೆದ 4 ದಿನದ ಹಿಂದೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಗ್ರಾಮಸ್ಥರ ಮನವಿಯಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಗ್ರಾಮದ ರಾಮಕೃಷ್ಣ ಎಂಬುವರ ಜಮೀನಿನಲ್ಲಿ ಬೋನ್ ಇರಿಸಿದ್ದರು.
ಈ ಬೋನಿಗೆ ಗಂಡು ಚಿರತೆ ಬಿದ್ದಿದ್ದು, ಸ್ಥಳಾಂತರ ಮಾಡುವಾಗ ಗಾಬರಿಗೊಂಡ ಚಿರತೆ ತಪ್ಪಿಸಿಕೊಳ್ಳಲು ಯತ್ನಿಸಿ ತಲೆಗೆ ತೀವ್ರತರದ ಗಾಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.