ಕರ್ನಾಟಕ

karnataka

ETV Bharat / briefs

ಜಾಗಕ್ಕಾಗಿ ಮನುಷ್ಯರು ಮಾತ್ರ ಗಲಾಟೆ ಮಾಡ್ತಿಲ್ಲ,ಇಲ್ಲಿ ಚಿರತೆಗಳದ್ದೂ ಅದೇ ಕತೆ! - undefined

ನಾಗರಹೊಳೆ ವ್ಯಾಪ್ತಿಯ ದಮ್ಮನಕಟ್ಟೆ ಸಫಾರಿ ವಲಯದಲ್ಲಿ ಚಿರತೆಗಳ ನಡುವೆ ನಡೆದ ಕಾಳಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಚಿರತೆಗಳ ಫೈಟ್

By

Published : Jun 5, 2019, 12:16 PM IST

ಮೈಸೂರು: ಮರದ ಮೇಲಿನ ಜಾಗವನ್ನು ಆಕ್ರಮಿಸಿಕೊಳ್ಳಲು ಚಿರತೆಗಳು ಪರಸ್ಪರ ಕಾದಾಡಿ ಗಾಯ ಮಾಡಿಕೊಂಡ ಘಟನೆ ನಾಗರಹೊಳೆಯ ವ್ಯಾಪ್ತಿಯ ದಮ್ಮನಕಟ್ಟೆ ಸಫಾರಿ ವಲಯದಲ್ಲಿ ನಡೆದಿದೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ನಾಗರಹೊಳೆ ಅಭಯಾರಣ್ಯ ಪ್ರದೇಶದಲ್ಲಿ ಚಿರತೆಗಳ ಕಾಳಗ

ಹಲವು ದಿನಗಳಿಂದ ಈ ಎರಡೂ ಚಿರತೆಗಳು ಜೊತೆಯಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಇತ್ತೀಚೆಗೆ ಒಂದೇ ಮರದಲ್ಲಿ ವಿರಮಿಸಿಕೊಳ್ಳಲು ಇವುಗಳ ಮಧ್ಯೆ ಮೆಗಾ ಫೈಟ್ ನಡೆದಿದೆ. ಈ ವೇಳೆ ಮರದಿಂದ ಬಿದ್ದ ಕಪ್ಪು ಚಿರತೆ ಮುಖಕ್ಕೆ ಗಾಯವಾಗಿದೆ. ಈ ವಿಡಿಯೋ ಪ್ರವಾಸಿಗರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ವೈರಲ್‌ ಆಗ್ತಿದೆ.

For All Latest Updates

TAGGED:

ABOUT THE AUTHOR

...view details