ಕರ್ನಾಟಕ

karnataka

ETV Bharat / briefs

ನನ್ನ ಗಂಡನನ್ನು ಮೂತ್ರ ವಿಸರ್ಜನೆಗೂ ಕೂಡ ಬಿಡುತ್ತಿಲ್ಲ: ಪತ್ರಕರ್ತ ಸಿದ್ದೀಕ್ ಕಪ್ಪನ್ ಪತ್ನಿಯಿಂದ ನ್ಯಾಯಕ್ಕೆ ಮನವಿ - ಕೇರಳ

ನಾನು ಒಬ್ಬ ಮಹಿಳೆ ಮತ್ತು ಅವರ ಹೆಂಡತಿಯಾಗಿ ತುಂಬಾ ನೋವು ಅನುಭವಿಸುತ್ತಿದ್ದೇನೆ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಹತ್ಯೆಯನ್ನು ವರದಿ ಮಾಡಲು ಕಪ್ಪನ್‌ ಉತ್ತರ ಪ್ರದೇಶದ ಹಥ್ರಾಸ್‌ಗೆ ತೆರಳುತ್ತಿದ್ದಾಗ ಬಂಧಿಸಲಾಗಿತ್ತು..

'Chained to cot, forced to urninate in bottle'; Siddique Kappan's wife seeks justice
'Chained to cot, forced to urninate in bottle'; Siddique Kappan's wife seeks justice

By

Published : Apr 25, 2021, 7:27 PM IST

ಮಲಪ್ಪುರಂ (ಕೇರಳ) :ಕಾನೂನುಬಾಹಿರ ಚಟುವಟಿಕೆಗಳ ಸಂರಕ್ಷಣಾ ಕಾಯ್ದೆ (ಯುಎಪಿಎ) ಅಡಿಯಲ್ಲಿ ಉತ್ತರ ಪ್ರದೇಶ ಪೊಲೀಸರು ಬಂಧಿಸಿರುವ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರ ಪತ್ನಿ ರೈಹಂಥ್​​ ಅವರು ಪೊಲೀಸರು ತಮ್ಮ ಗಂಡನನ್ನು ತುಂಬಾ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮಥುರಾ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿರುವ ಅವರನ್ನು ಮಂಚಕ್ಕೆ ಚೈನ್ ಹಾಕಿ ಕಟ್ಟಿಹಾಕಲಾಗಿದೆ. ಮೂತ್ರ ವಿಸರ್ಜನೆ ಮಾಡಲೂ ಕೂಡ ಬಿಡುತ್ತಿಲ್ಲ ಎಂದು ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆ ಇವರಿಗೆ ಕೊರೊನಾ ಪಾಸಿಟಿವ್​ ಬಂದ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಪ್ಪನ್ ಅವರನ್ನು ರಕ್ಷಿಸಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಸ್ತಕ್ಷೇಪಕ್ಕೆ ರೈಹಂಥ್ ​ ಒತ್ತಾಯ ಮಾಡಿದ್ದಾರೆ. ಜೈಲಿನಲ್ಲಿರುವುದಕ್ಕಿಂತ ಆಸ್ಪತ್ರೆಯಲ್ಲಿ ಅವರ ಜೀವನವು ತುಂಬಾ ಶೋಚನೀಯವಾಗಿದೆ.

ಅವರಿಗೆ ಸರಿಯಾಗಿ ಆಹಾರವನ್ನು ಸಹ ನೀಡುತ್ತಿಲ್ಲ.ಅವರನ್ನು ಸರಪಳಿಗಳಿಂದ ಕಟ್ಟಿಹಾಕಿರುವುದರಿಂದ ಅವರು ಚಲಿಸಲು ಸಾಧ್ಯವಾಗುತ್ತಿಲ್ಲ. ಶೌಚಾಲಯಕ್ಕೆ ಹೋಗಲು ಅನುಮತಿ ನೀಡದೆ ಬಾಟಲಿಯಲ್ಲಿ ಮೂತ್ರ ವಿಸರ್ಜಿಸಲು ಒತ್ತಾಯಿಸಲಾಗುತ್ತದೆ ಎಂದು ದೂರಿದ್ದಾರೆ.

ಈ ಮೊದಲು, ಈ ವಿಷಯದಲ್ಲಿ ಉಪ-ನ್ಯಾಯವಾದ್ದರಿಂದ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದರು. ಕನಿಷ್ಠ ಈಗ ಅವರು ಮಧ್ಯಪ್ರವೇಶಿಸಬೇಕು.

ನಾನು ಒಬ್ಬ ಮಹಿಳೆ ಮತ್ತು ಅವರ ಹೆಂಡತಿಯಾಗಿ ತುಂಬಾ ನೋವು ಅನುಭವಿಸುತ್ತಿದ್ದೇನೆ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಹತ್ಯೆಯನ್ನು ವರದಿ ಮಾಡಲು ಕಪ್ಪನ್‌ ಉತ್ತರ ಪ್ರದೇಶದ ಹಥ್ರಾಸ್‌ಗೆ ತೆರಳುತ್ತಿದ್ದಾಗ ಬಂಧಿಸಲಾಗಿತ್ತು.

ಕಪ್ಪನ್ ಅವರು ಪ್ರತಿನಿಧಿಸುವ ಸಂಘಟನೆಯ ಬಗ್ಗೆ ಸುಳ್ಳು ಹೇಳಿದ್ದಾರೆ. ಅಂತಾರಾಷ್ಟ್ರೀಯ ಮೂಲಗಳಿಂದ ಸಂಘಟನೆ ಹಣವನ್ನು ಪಡೆದುಕೊಂಡಿದೆ ಎಂದು ಅಲ್ಲಿನ ಸರ್ಕಾರ ಹೇಳದೆ. ಹಾಗೆ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಆರೋಪಿಸಿದೆ.

ABOUT THE AUTHOR

...view details