ಲಂಡನ್:12ನೇ ಆವೃತ್ತಿಯ ವಿಶ್ವಕಪ್ನ ತನ್ನ ಮೊದಲ ಪಂದ್ಯದಲ್ಲೇ ಹೀನಾಯ ಸೋಲು ಕಂಡಿರುವ ಪಾಕಿಸ್ತಾನ ತಂಡ ಚಾಂಪಿಯನ್ ಆಗುವ ಲಕ್ಷಣಗಳು ಕಾಣುತ್ತಿವೆ. ಇದು ನಿಜವಾಗವಾಗದಿದ್ದರೂ ಪಾಕ್ ಅಭಿಮಾನಿಗಳು 1992ರ ವಿಶ್ವಕಪ್ನ ಪಲಿತಾಂಶಗಳನ್ನು ಹೋಲಿಕೆ ಮಾಡಿ ತಮ್ಮ ತಂಡ ಚಾಂಪಿಯನ್ ಆಗುತ್ತದೆ ಎಂದು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.
ಮೊದಲ ಪಂದ್ಯದಲ್ಲಿ ಎರಡು ವಿಶ್ವಕಪ್ನಲ್ಲೂ ಹೀನಾಯ ಸೋಲು
ಪ್ರಸ್ತುತ ವಿಶ್ವಕಪ್ನಲ್ಲಿ ತನ್ನ ಮೊದಲ ಪಂದ್ಯದಲ್ಲೇ ವಿಂಡೀಸ್ ವಿರುದ್ಧ ಕೇವಲ 105 ರನ್ಗಳಿಗೆ ಆಲೌಟ್ ಆಗಿದ್ದ ಪಾಕ್ ತಂಡ 10 ವಿಕೆಟ್ಗಳ ಹೀನಾಯ ಸೋಲುಕಂಡಿತ್ತು. ಕಾಕತಾಳೀಯವೆಂದರೆ 1992ರ ವಿಶ್ವಕಪ್ನಲ್ಲಿ ಪಾಕಿಸ್ತಾನ ಇದೇ ವಿಂಡೀಸ್ ವಿರುದ್ಧ 74 ರನ್ಗಳಿಗೆ ಆಲೌಟ್ ಆಗಿ 10 ವಿಕೆಟ್ಗಳ ಹೀನಾಯ ಸೋಲುಕಂಡಿತ್ತು.
ಎರಡನೇ ಪಂದ್ಯದಲ್ಲಿ ಗೆಲುವು!
ನಂತರ 2 ನೇ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ 53 ರನ್ಗಳಿಂದ ಗೆಲುವು ಸಾಧಿಸಿದ್ದರು. ಈ ವಿಶ್ವಕಪ್ನಲ್ಲಿ ಪಾಕ್ ತಂಡ ತನ್ನ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 15 ರನ್ಗಳಿಂದ ಗೆದ್ದು ಬೀಗಿದೆ.