ಹೈದರಾಬಾದ್:ಕೋವಿಡ್ ಬಿಕ್ಕಟ್ಟಿನಲ್ಲಿ ಪ್ರತಿಪಕ್ಷಗಳು ಜವಾಬ್ದಾರಿಯುತವಾಗಿ ನಡೆದುಕೊಂಡಿವೆ. ಸುಮಾರು ಹತ್ತು ದಿನಗಳ ಹಿಂದೆ, ಎಲ್ಲಾ ವೈದ್ಯಕೀಯ ಕೇಂದ್ರಗಳಿಗೆ ನಿರಂತರವಾಗಿ ಆಮ್ಲಜನಕವನ್ನು ಒದಗಿಸುವುದು ಹಾಗೂ ಇಡೀ ದೇಶದಲ್ಲಿ ಉಚಿತ ಸಾರ್ವತ್ರಿಕ ವ್ಯಾಕ್ಸಿನೇಷನ್ ನೀಡುವಂತೆ ವಿವಿಧ ವಿರೋಧ ಪಕ್ಷಗಳ ಮುಖಂಡರು ಕೇಂದ್ರಕ್ಕೆ ಮನವಿ ಮಾಡಿದ್ದರು.
ಇನ್ನು ಸಲ್ಲಿಸಿದ ಮನವಿಗೆ ಸರಿಯಾದ ಪ್ರತಿಕ್ರಿಯೆ ಇಲ್ಲದಿರುವುದನ್ನು ಖಂಡಿಸಿ, ನಾಲ್ಕು ಮುಖ್ಯಮಂತ್ರಿಗಳು ಮತ್ತು 12 ಪ್ರತಿಪಕ್ಷಗಳು ಜಂಟಿಯಾಗಿ ಪ್ರಧಾನಮಂತ್ರಿಯವರಿಗೆ ಮತ್ತೊಮ್ಮೆ ಪತ್ರ ಬರೆದು, ತಕ್ಷಣದ ಕ್ರಮ ಕೈಗೊಳ್ಳಬೇಕೆಂದು ಕೋರಿವೆ.
ಎಲ್ಲ ದೇಶವಾಸಿಗಳಿಗೆ ಉಚಿತ ವ್ಯಾಕ್ಸಿನೇಷನ್ಗಿ 35,000 ಕೋಟಿ ರೂ.ಗಳ ಬಜೆಟ್ ಹಂಚಿಕೆಯನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿವೆ. ಈ ಹಿನ್ನೆಲೆಯಲ್ಲಿ ನಿಜವಾಗಿ ಆಳವಾದ ಪರಿಸ್ಥಿತಿಯ ಬಗ್ಗೆ ಕೇಂದ್ರಕ್ಕೆ ಜಂಟಿ ಮನವಿ ಮಾಡಲು ಪ್ರತಿಪಕ್ಷಗಳು ಪ್ರೇರೇಪಿಸಿದೆ.
ಕೇಂದ್ರಕ್ಕೆ ಸುಪ್ರೀಂ ಚಾಟಿ
ಪ್ರಮುಖ ಲಸಿಕೆ ತಯಾರಕ ಕಂಪನಿಗಳು ದೇಶದಲ್ಲಿದ್ದೂ ಕೂಡಾ ದೇಶವು ಲಸಿಕೆಗಳ ಕೊರತೆ ಎದುರಿಸುತ್ತಿರುವುದು, ಯೋಜನೆಯ ಕೊರತೆಯ ಪರಿಣಾಮ ಎಂಬುದು ಸ್ಪಷ್ಟವಾಗಿ ತಿಳಿಯುತ್ತಿದೆ. ಕಳೆದ ಹಲವಾರು ದಶಕಗಳಿಂದ ದೇಶವು ಹಲವಾರು ರಾಷ್ಟ್ರೀಯ ಉಚಿತ ಲಸಿಕಾ ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಆದರೆ, ಕೋವಿಡ್ ಲಸಿಕೆ ವಿತರಣೆಗೆ ದೇಶ ಉಚಿತ ವ್ಯಾಕ್ಸಿನೇಷನ್ ಕಾರ್ಯವಿಧಾನವನ್ನು ಏಕೆ ಬಳಸಲಿಲ್ಲ ಎಂಬ ಬಗ್ಗೆ ಸುಪ್ರೀಂಕೋರ್ಟ್ ಇತ್ತೀಚೆಗೆ ಕೇಂದ್ರಕ್ಕೆ ಒಂದು ಪ್ರಶ್ನೆಯನ್ನು ಮುಂದಿಟ್ಟಿತ್ತು.
ಈ ಲಸಿಕೆ ಕೊರತೆ ಒಂದೆಡೆ ಜುಲೈ ವರೆಗೆ ದೇಶವನ್ನು ಕಾಡುತ್ತಲೇ ಇರುತ್ತದೆ ಎನ್ನಲಾಗಿದ್ದು, ಮತ್ತೊಂದೆಡೆ ಆಮ್ಲಜನಕ ಮತ್ತು ಇತರ ಜೀವ ಸಂರಕ್ಷಣಾ ಔಷಧಗಳ ಕೊರತೆ ಇದೆ. ಈ ಅಂದಾಜಿನ ಹಿನ್ನೆಲೆಯಲ್ಲಿ, ರಾಜ್ಯಗಳ ಬೆಂಬಲದೊಂದಿಗೆ ಪರಿಸ್ಥಿತಿಯನ್ನು ಸುಧಾರಿಸಲು ಕೇಂದ್ರವು ಚುರುಕಾಗಿ ಕಾರ್ಯನಿರ್ವಹಿಸಬೇಕಿದೆ.