ಘಾಜಿಯಾಬಾದ್:ಪ್ರಸಕ್ತ ಸಾಲಿನ ಸಿಬಿಎಸ್ಇ 12ನೇ ತರಗತಿ ಫಲಿತಾಂಶ ಪ್ರಕಟಗೊಂಡಿದ್ದು,ಇಬ್ಬರು ಮಹಿಳಾ ವಿದ್ಯಾರ್ಥಿಗಳು ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಇವರಲ್ಲಿ ಘಾಜಿಯಾಬಾದ್ನ ಹನ್ಸಿಕಾ ಶುಕ್ಲಾ ಮನದಾಳ ಬಿಚ್ಚಿಟ್ಟರು.
ಸೋಶಿಯಲ್ ಮೀಡಿಯಾದಿಂದ ದೂರವಿರಿ: CBSE ಟಾಪರ್ ಹನ್ಸಿಕಾ ಶುಕ್ಲಾ ಸಲಹೆ - ಹನ್ಸಿಕಾ ಶುಕ್ಲಾ
ಸದಾ ಸಾಮಾಜಿಕ ಜಾಲತಾಣಗಳಲ್ಲಿ ಬ್ಯುಸಿಯಾಗಿರುವ ವಿದ್ಯಾರ್ಥಿಗಳಿಗೆ ಸಿಬಿಎಸ್ಇ ಟಾಪರ್ ಹನ್ಸಿಕಾ ಶುಕ್ಲಾ ಕಿವಿಮಾತು ಹೇಳಿದ್ದು, ತಮ್ಮ ಭವಿಷ್ಯದ ಯೋಜನೆ ಬಗ್ಗೆ ಮಾತನಾಡಿದ್ದಾರೆ.
ಟಾಪರ್ ಆಗಲು ಯಾವುದೇ ರೀತಿಯ ಕೋಚಿಂಗ್ ಪಡೆದುಕೊಂಡಿಲ್ಲ ಎಂದಿರುವ ಹನ್ಸಿಕಾ, ಶಿಕ್ಷಕರು ಹೇಳಿರುವ ಪಾಠವನ್ನು ಸರಿಯಾಗಿ ಕೇಳಿಸಿಕೊಂಡು ಮನೆಯಲ್ಲಿ ಸುಮಾರು 8 ಗಂಟೆಗಳ ಕಾಲ ವ್ಯಾಸಂಗ ಮಾಡಿದ್ದರಿಂದ ಇಷ್ಟೊಂದು ಅಂಕ ಪಡೆದುಕೊಳ್ಳಲು ಸಾಧ್ಯವಾಯಿತು ಎಂದರು. ಇದೇ ವೇಳೆ ತಮ್ಮ ಮುಂದಿನ ಕನಸುಗಳ ಬಗ್ಗೆ ಮಾತನಾಡಿರುವ ಅವರು, ದೇಶದ ಪ್ರತಿಷ್ಟಿತ, ಭಾರತೀಯ ವಿದೇಶಾಂಗ ಸೇವೆ (IFS) ಗೆ ಸೇರುವ ಬಯಕೆ ಹೊಂದಿರುವುದಾಗಿ ಹೇಳಿದರು.
ಹನ್ಸಿಕಾ ಶುಕ್ಲಾ ಇತಿಹಾಸ,ರಾಜ್ಯಶಾಸ್ತ್ರ, ಮನೋವಿಜ್ಞಾನ ಹಾಗೂ ಹಿಂದೂಸ್ತಾನಿ ಸಂಗೀತದಲ್ಲಿ ತಲಾ 100 ಅಂಕಗಳಿಸಿದ್ದು, ಆಂಗ್ಲ ಭಾಷೆಯಲ್ಲಿ ಮಾತ್ರ 99 ಅಂಕ ಪಡೆದುಕೊಂಡಿದ್ದಾರೆ.