ಬಳ್ಳಾರಿ :ಕೋವಿಡ್-19 ಎಸ್ಒಪಿ ನಿಯಮಗಳ ಉಲ್ಲಂಘನೆ ಮಾಡಿರುವ ಆರೋಪದ ಮೇಲೆ ಹಡಗಲಿ ಶಾಸಕ ಪಿ ಟಿ ಪರಮೇಶ್ವರ ನಾಯ್ಕ್ ವಿರುದ್ಧ ಪ್ರಕರಣ ದಾಖಲಾಗಿದೆ.
ಕೊರೊನಾ ನಿಯಮ ಉಲ್ಲಂಘನೆ.. ಮಾಜಿ ಸಚಿವ ಪಿ ಟಿ ಪರಮೇಶ್ವರ ನಾಯ್ಕ್ ಮೇಲೆ ಪ್ರಕರಣ ದಾಖಲು - Bellary district news
50ಕ್ಕಿಂತ ಹೆಚ್ಚುಮಂದಿ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಬಾರದು ಎಂಬ ಎಸ್ಒಪಿ ನಿಯಮಾವಳಿಯನ್ನು ಈ ಆರತಕ್ಷತಾ ಕಾರ್ಯಕ್ರಮದಲ್ಲಿ ಉಲ್ಲಂಘಿಸಿರೋ ಆರೋಪ ಹಿನ್ನೆಲೆ ಕೇಸ್ ದಾಖಲಾಗಿದೆ.
![ಕೊರೊನಾ ನಿಯಮ ಉಲ್ಲಂಘನೆ.. ಮಾಜಿ ಸಚಿವ ಪಿ ಟಿ ಪರಮೇಶ್ವರ ನಾಯ್ಕ್ ಮೇಲೆ ಪ್ರಕರಣ ದಾಖಲು Case registered against pt parameshwar naik](https://etvbharatimages.akamaized.net/etvbharat/prod-images/768-512-04:02-kn-bly-4-ex-minister-ptp-against-complent-7203310-15062020155909-1506f-1592216949-165.jpg)
Case registered against pt parameshwar naik
ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಲಕ್ಷ್ಮಿಪುರದಲ್ಲಿ ನಡೆದ ಪಿ ಟಿ ಪರಮೇಶ್ವರ ನಾಯ್ಕ್ ಅವರ ಪುತ್ರನ ಮದುವೆ ಸಮಾರಂಭದಲ್ಲಿ ಕೊರೊನಾ ಎಸ್ಒಪಿ ನಿಯಮಗಳ ಉಲ್ಲಂಘನೆ ಮಾಡಲಾಗಿದೆ.
50ಕ್ಕಿಂತ ಹೆಚ್ಚುಮಂದಿ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಬಾರದು ಎಂಬ ಎಸ್ಒಪಿ ನಿಯಮಾವಳಿಯನ್ನು ಈ ಆರತಕ್ಷತಾ ಕಾರ್ಯಕ್ರಮದಲ್ಲಿ ಉಲ್ಲಂಘಿಸಿರೋದು ಕಂಡ ಬಂದ ಹಿನ್ನೆಲೆ ಬಳ್ಳಾರಿ ಜಿಲ್ಲಾಡಳಿತ ಶಾಸಕ ಪಿ ಟಿ ಪರಮೇಶ್ವರ ನಾಯ್ಕ್ ವಿರುದ್ಧ ಪ್ರಕರಣ ದಾಖಲಿಸಿದೆ.