ಕರ್ನಾಟಕ

karnataka

ಇದು ಪ್ರಾರಂಭ ಅಷ್ಟೇ.. ಅವರು ಕನಸಲ್ಲೂ ಕಾಣದ ಹೊಡೆತ ನೀಡುತ್ತೇವೆ: ಇಸ್ರೇಲ್ ಪ್ರಧಾನಿ

ಇನ್ನು ಗಾಜಾ ದಾಳಿ ಕುರಿತಂತೆ ನೆತನ್ಯಾಹು ಅವರೊಂದಿಗಿನ ಯುಎಸ್​ ಅಧ್ಯಕ್ಷ ಜೋ ಬೈಡನ್ ದೂರವಾಣಿ ಕರೆ ಮೂಲಕ ಸಂಪರ್ಕಿಸಿದ್ದಾರೆ. ತಮ್ಮ ಅಚಲ ಬೆಂಬಲವನ್ನೂ ನೀಡಿದ್ದಾರೆ ಎಂದು ಇಸ್ರೇಲ್​ ಪ್ರಧಾನಿ ತಿಳಿಸಿದ್ದಾರೆ.

By

Published : May 13, 2021, 3:39 PM IST

Published : May 13, 2021, 3:39 PM IST

Benjamin Netanyahu
Benjamin Netanyahu

ಟೆಲ್ ಅವೀವ್ / ಗಾಜಾ ನಗರ(ಇಸ್ರೇಲ್):ಇಸ್ರೇಲ್ ತನ್ನ ಮಿಲಿಟರಿ ಕಾರ್ಯಾಚರಣೆ ಚುರುಕುಗೊಳಿಸಿದೆ. ದೇಶದ ಹಲವೆಡೆ ಹಮಾಸ್ ಬಂಡುಕೋರರನ್ನು ಕೊಂದು, 14 ಮಹಡಿಗಳ ಕಟ್ಟಡವನ್ನು ಗಾಜಾ ಪ್ರದೇಶದಲ್ಲಿ ನೆಲಸಮಗೊಳಿಸಿದೆ.

"ಇದು ಪ್ರಾರಂಭ ಮಾತ್ರ. ಅವರು ಕನಸಲ್ಲೂ ಕಾಣದಂತಹ ಹೊಡೆತಗಳನ್ನು ಅವರ ಮೇಲೆ ಹೊಡೆಯುತ್ತೇವೆ" ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬುಧವಾರ ಹೇಳಿದ್ದಾರೆಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಭದ್ರತಾ ಕ್ಯಾಬಿನೆಟ್ ಸಭೆಯ ಬಳಿಕ ಹಮಾಸ್ ಆಳ್ವಿಕೆಯಲ್ಲಿರುವ ಗಾಜಾ ಪ್ರದೇಶವನ್ನು ಗುರಿಯಾಗಿಸಿಕೊಂಡು ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಸರ್ಕಾರ ಯೋಜಿಸುತ್ತಿದೆ, ಎಂದು ಸ್ಥಳೀಯ ಮಾಧ್ಯಮಗಳು ಬುಧವಾರ ವರದಿ ಮಾಡಿವೆ.

ಇತ್ತೀಚಿನ ಹಿಂಸಾಚಾರದಲ್ಲಿ ಡಜನ್​ಗಟ್ಟಲೆ ಜನರು ಸಾವನ್ನಪ್ಪಿದ್ದಾರೆ. ಅವರಲ್ಲಿ ಹೆಚ್ಚಿನವರು ಗಾಜಾದಲ್ಲಿದ್ದವರು. ಹಾಗಾಗಿ ಇದು ಹಮಾಸ್ ಮತ್ತು ಇಸ್ರೇಲ್ ಅನ್ನು ಸಂಪೂರ್ಣ ಯುದ್ಧದ ಅಂಚಿನಲ್ಲಿರಿಸಿದೆ.

ಇನ್ನು ಗಾಜಾ ದಾಳಿ ಕುರಿತಂತೆ ನೆತನ್ಯಾಹು ಅವರೊಂದಿಗಿನ ಅಮೆರಿಕ​ ಅಧ್ಯಕ್ಷ ಜೋ ಬೈಡನ್​ ದೂರವಾಣಿ ಕರೆ ಮೂಲಕ ಸಂಪರ್ಕಿಸಿದ್ದಾರೆ. "ಹಮಾಸ್, ಜೆರುಸಲೆಮ್ ಮತ್ತು ಟೆಲ್ ಅವೀವ್ ಸೇರಿದಂತೆ ಇತರ ಭಯೋತ್ಪಾದಕ ಗುಂಪುಗಳು ನಡೆಸಿದ ರಾಕೆಟ್ ದಾಳಿಯನ್ನು ಅವರು ಖಂಡಿಸಿದ್ದಾರೆ" ಎಂದು ಶ್ವೇತಭವನ ಬುಧವಾರ ತಡರಾತ್ರಿ ತಿಳಿಸಿದೆ.

'ಇಸ್ರೇಲ್​ನ ಭದ್ರತೆಗಾಗಿ ಹಾಗೂ ಅಲ್ಲಿನ ನಾಗರಿಕರನ್ನು ರಕ್ಷಿಸುವ ಸಲುವಾಗಿ, ನ್ಯಾಯಸಮ್ಮತ ಹಕ್ಕಿಗೆ ತನ್ನ ಅಚಲ ಬೆಂಬಲವನ್ನು ಬೈಡನ್​ ತಿಳಿಸಿದ್ದಾರೆ, ಎಂದು ಶ್ವೇತಭವನ ಹೇಳಿದೆ.

ABOUT THE AUTHOR

...view details