ಕರ್ನಾಟಕ

karnataka

ETV Bharat / briefs

ಬಂಟ್ವಾಳ: ಖ್ಯಾತ ಬ್ಯಾರಿ ಹಾಡುಗಾರ ಮುಹಮ್ಮದ್ ಶರೀಫ್ ನಿಧನ - Byari singer Mahamd Sharif died

ಪ್ರಸಿದ್ಧ ಬ್ಯಾರಿ ಹಾಡುಗಾರ ಮುಹಮ್ಮದ್ ಶರೀಫ್ ಬಿ.ಸಿ.ರೋಡ್ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

Mahamd Sharif
Mahamd Sharif

By

Published : Jun 15, 2020, 8:53 PM IST

ಬಂಟ್ವಾಳ:ಪ್ರಸಿದ್ಧ ಬ್ಯಾರಿ ಹಾಡುಗಾರ ಮುಹಮ್ಮದ್ ಶರೀಫ್ ಬಿ.ಸಿ.ರೋಡ್ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

54 ವರ್ಷದ ಬಿ.ಸಿ.ರೋಡ್ ಕೈಕಂಬ ಸಮೀಪದ ನಂದರಬೆಟ್ಟು ನಿವಾಸಿಯಾಗಿದ್ದು, ಬ್ಯಾರಿ ಹಾಡುಗಳಿಗೆ ಪ್ರಸಿದ್ಧಿಯಾಗಿದ್ದರು.

ಇವರು ಸುಮಾರು 35 ವರ್ಷಗಳಿಂದ ಬ್ಯಾರಿ ಹಾಡುಗಳನ್ನು ಸ್ವಯಂ ರಚಿಸಿ ಹಾಡುತ್ತಿದ್ದರು. ಒಂದು ಕಾಲದಲ್ಲಿ ಮದುವೆ ಮನೆ ವಿವಿಧ ಸಮಾರಂಭಗಳಲ್ಲಿ ಬ್ಯಾರಿ ಹಾಡುಗಳನ್ನು ಹಾಡುವ ಮೂಲಕ ಮನೆ ಮಾತಾಗಿದ್ದರು.

ಅವರು ಹಾಡಿರುವ ಕೆಲವು ಪ್ರಸಿದ್ಧ ಹಾಡುಗಳು ಇಂದಿಗೂ ಪ್ರಚಲಿತವಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ಅವರು ಹಾಡಿರುವ 'ಇತಿಹಾಸತೆ ಪೆರ್ನಾಳ್' ಅವರ ಕೊನೆ ಹಾಡಾಗಿದೆ.

ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಹಾಡಿದ್ದು, ಸ್ಥಳೀಯವಾಗಿ ಹಲವು ಪುರಸ್ಕಾರ, ಸನ್ಮಾನಗಳಿಗೆ ಪಾತ್ರರಾಗಿದ್ದಾರೆ.

ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಇಂದು ಎದೆನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.

ಮೃತರು ಪತ್ನಿ, ಐವರು ಪುತ್ರರು, ಇಬ್ಬರು ಪುತ್ರಿಯರು ಸಹಿತ ಅಪಾರ ಬಂಧುಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ.

ABOUT THE AUTHOR

...view details