ಹೈದರಾಬಾದ್:ಕ್ರೀಡಾಳುಗಳು ತಾವು ಆಡುತ್ತಿರುವ ಕ್ರೀಡೆಯ ಜೊತೆಗೆ ಇತರ ಕ್ರೀಡೆಗಳಿಂದಲೂ ಸ್ಪೂರ್ತಿ ಪಡೆದು ಸಾಧನೆ ಮಾಡುತ್ತಾರೆ ಅನ್ನೋದಕ್ಕೆ ವಿಶ್ವದಲ್ಲಿ ಅನೇಕ ನಿದರ್ಶನಗಳಿವೆ. ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ ಅನೇಕ ಪ್ರತಿಭೆಗಳು ಈ ಹಿಂದೆ ಫುಟ್ಬಾಲ್, ಹಾಕಿ ಹಾಗು ಇತರ ಕ್ರೀಡೆಗಳಲ್ಲಿ ಸಾಧನೆ ಮಾಡಿದ್ದಾರೆ.ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಲೀಲಾಜಾಲವಾಗಿ ಬ್ಯಾಟ್ ಬೀಸಲು ಅವರಿಗೆ ಹಾಕಿ ಆಟದ ಕೌಶಲಗಳು ಸಹಕಾರಿಯಾಗಿದ್ದೇಗೆ ಗೊತ್ತೇ?
ಜೋಸ್ ಬಟ್ಲರ್, ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್ ಕಮ್ ಬ್ಯಾಟ್ಸಮನ್. ಇವರು ಕ್ರಿಕೆಟ್‌ನಲ್ಲಿ ಶೈನ್ ಆಗಲು ಕಾರಣವಾಗಿದ್ದು ಹಾಕಿ ಅನ್ನೋ ವಿಚಾರ ನಿಮಗೆ ಗೊತ್ತೇ? ಅಷ್ಟು ಮಾತ್ರವಲ್ಲ. ವಿಶ್ವ ಕ್ರಿಕೆಟ್‌ನ ಅನೇಕ ಆಟಗಾರರು ಕ್ರಿಕೆಟ್‌ಗೂ ಮುನ್ನ ಬೇರೆ ಆಟಗಳಲ್ಲಿ ಪ್ರತಿಭೆ ತೋರಿಸಿದ್ದರು.
ಮೂಲತ: ಹಾಕಿ ಆಟಗಾರರಾಗಿದ್ದ ಜೋಸ್ ಬಟ್ಲರ್, ಹಾಕಿಯಲ್ಲಿ ಸ್ಟ್ರೈಕರ್‌ನ ವಿವಿಧ ಭಂಗಿಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಕೊನೆಯ ಕ್ಷಣದಲ್ಲಿ ಹಾಕಿ ಸ್ಟಿಕ್‌ನ ಆ್ಯಂಗಲ್ ಬದಲಾಯಿಸಿ ಚೆಂಡನ್ನು ಗೋಲಿನೆಡೆಗೆ ಸಾಗಿಸುವ ಕೌಶಲ ಅಲ್ಲಿಂದ ಅವರಿಗೆ ಕರಗತವಾಗಿದೆ. ಬಟ್ಲರ್ ಕೇವಲ ಹಾಕಿಯಿಂದ ಮಾತ್ರ ಕೌಶಲಗಳನ್ನು ಕಲಿತಿಲ್ಲ. ಟೆನ್ನಿಸ್ ಮತ್ತು ಬೇಸ್ ಬಾಲ್ ಕ್ರೀಡೆಗಳಿಂದಲೂ ಐಡಿಯಾಗಳನ್ನು ಪಡೆದಿದ್ದಾರೆ. ಈ ಕ್ರೀಡೆಗಳಿಂದ ಪಡೆದ ಕೌಶಲಗಳನ್ನು ಅವರನ್ನು ಕ್ರಿಕೆಟ್‌ನಲ್ಲಿ ಬಳಸಿಕೊಳ್ತಿದ್ದಾರೆ. ರ್ಯಾಂಪ್ ಶಾಟ್ ಬಟ್ಲರ್‌ನ ವಿಶೇಷತೆಗಳಲ್ಲೊಂದಾಗಿದ್ದು ಅವರು ಇದನ್ನು ಕಲಿತಿರುವುದು ಟೆನ್ನಿಸ್ ಮತ್ತು ಬೇಸ್ ಬಾಲ್‌ಗಳಲ್ಲಿ ಗಮನಿಸಿದ ಕೌಶಲಗಳ ಮೂಲಕ ಅಂತ ಅವರೇ ಹೇಳಿದ್ದಾರೆ. ಒಂದು ವೇಳೆ ಈ ಶಾಟ್‌ನ ಅವರು ಆರೇಳು ವರ್ಷಗಳ ಹಿಂದೇನೇ ಶುರುಮಾಡಿದ್ದರೆ, ಅದಕ್ಕವರು ಪೇಟೆಂಟ್ ಪಡೀಬಹುದಿತ್ತು ಅಂತ ಅವರ ಕೋಚ್ 2013 ರಲ್ಲೇ ತಮಾಷೆ ಮಾಡಿದ್ದರಂತೆ.