ಕರ್ನಾಟಕ

karnataka

ETV Bharat / briefs

ಸೋನಿಯಾ-ಮಾಯಾ ಭೇಟಿ ಇಲ್ಲ...! ಸ್ಪಷ್ಟನೆ ನೀಡಿದ ಬಿಎಸ್​ಪಿ ನಾಯಕ - ಬಿಎಸ್ಪಿ

ಚುನಾವಣಾ ದಿನಾಂಕ ಘೋಷಣೆಗೂ ಮುನ್ನ ಮಹಾಘಟಬಂಧನದಲ್ಲಿ ಗುರುತಿಸಿಕೊಂಡಿದ್ದ ಮಾಯಾವತಿ ನಂತರದಲ್ಲಿ ಕಾಂಗ್ರೆಸ್ ವಿರುದ್ಧವೇ ಮಾತನಾಡಿ ಸುದ್ದಿಯಾಗಿದ್ದರು.

ಬಿಎಸ್ಪಿ

By

Published : May 20, 2019, 10:47 AM IST

ಲಖನೌ: ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಇಂದು ನವದೆಹಲಿಯಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಭೇಟಿಯಾಗಲಿದ್ದಾರೆ ಎನ್ನುವ ಮಾಹಿತಿಯನ್ನು ಬಿಎಸ್​ಪಿ ತಳ್ಳಿಹಾಕಿದೆ.

ಮಾಯಾವತಿ ಯಾವುದೇ ಮಾತುಕತೆಯನ್ನು ನವದೆಹಲಿಯಲ್ಲಿ ಹಮ್ಮಿಕೊಂಡಿಲ್ಲ. ಅವರು ಇಂದು ಲಖನೌದಲ್ಲೇ ಇರಲಿದ್ದಾರೆ ಎಂದು ಬಿಎಸ್​ಪಿ ನಾಯಕ ಎಸ್​.ಸಿ. ಮಿಶ್ರಾ ಸ್ಪಷ್ಟಪಡಿಸಿದ್ದಾರೆ.

ಚುನಾವಣಾ ದಿನಾಂಕ ಘೋಷಣೆಗೂ ಮುನ್ನ ಮಹಾಘಟಬಂಧನದಲ್ಲಿ ಗುರುತಿಸಿಕೊಂಡಿದ್ದ ಮಾಯಾವತಿ ನಂತರದಲ್ಲಿ ಕಾಂಗ್ರೆಸ್ ವಿರುದ್ಧವೇ ಮಾತನಾಡಿ ಸುದ್ದಿಯಾಗಿದ್ದರು.

ಇನ್ನೊಂದು ಬೆಳವಣಿಗೆಯಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಮುಖ ನಾಯಕರನ್ನು ಮಾತುಕತೆಗೆ ಕರೆ ನೀಡಿದ್ದಾರೆ. ಒಡಿಶಾ ಸಿಎಂ ನವೀನ್ ಪಟ್ನಾಯಕ್​​, ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್​​, ವೈಎಸ್​ಆರ್​ ಕಾಂಗ್ರೆಸ್ ಮುಖ್ಯಸ್ಥ ಜಗನ್​ಮೋಹನ್​ ರೆಡ್ಡಿಯನ್ನು ಮೇ 23ರ ಮಾತುಕತೆಗೆ ಆಹ್ವಾನಿಸಿದ್ದಾರೆ. ಮೇ 23ರಂದೇ ಫಲಿತಾಂಶ ಹೊರಬೀಳಲಿದೆ.

ABOUT THE AUTHOR

...view details