ಹೈದರಾಬಾದ್: ರಾಮಾಯಣ ಆಧಾರಿತ ಮುಂಬರುವ ಬಹು ನಿರೀಕ್ಷಿತ ಸಿನಿಮಾ 'ಸೀತಾ: ದಿ ಇನ್‌ಕಾರ್ನೇಷನ್' ಚಿತ್ರದಲ್ಲಿ ಸೀತೆಯಾಗಿ ನಡಿ ಕರೀನಾ ಕಪೂರ್ ಕಾಣಿಸಿಕೊಳ್ಳಲಿದ್ದಾರೆ ಎಂದು ಇತ್ತೀಚಿಗೆ ಸುದ್ದಿ ಹರಡಿತ್ತು. ಅಷ್ಟೇ ಅಲ್ಲದೆ, ಸೀತಾ ಪಾತ್ರದಲ್ಲಿ ನಟಿಸಲು ಕರೀನಾ ಸುಮಾರು 12 ಕೋಟಿ ರೂ. ಸಂಭಾವನೆಗೆ ಡಿಮ್ಯಾಂಡ್ ಮಾಡಿದ್ದಾರೆ ಎಂಬ ವದಂತಿ ಹಬ್ಬಿದೆ. ಆದರೆ, ಈ ವಿಚಾರ ತಿಳಿಯುತ್ತಿದ್ದಂತೆ ನೆಟಿಜನ್ಸ್ ಆಕ್ರೋಶ ಹೊರಹಾಕಿದ್ದಾರೆ.
ಅಲೌಕಿಕ್ ದೇಸಾಯಿ ನಿರ್ದೇಶನದ ಕೆ.ವಿ.ವಿಜಯೇಂದ್ರ ಪ್ರಸಾದ್ ಚಿತ್ರಕಥೆ ಬರೆದಿರುವ 'ಸೀತಾ: ದಿ ಇನ್‌ಕಾರ್ನೇಷನ್' ಚಿತ್ರದಲ್ಲಿ ಸೀತಾ ಮಾತೆಯ ಪಾತ್ರಕ್ಕೆ ಕರೀನಾ ಕಪೂರ್ ಖಾನ್ ಬೇಡ ಎಂದು ಹೇಳಿ ನೆಟಿಜನ್ಸ್ #BoycottKareena Khan ಅಭಿಯಾನವನ್ನು ಶುರು ಮಾಡಿಕೊಂಡಿದ್ದಾರೆ.
''ಸೀತಾ ಮಾತೆಯ ಪಾತ್ರಕ್ಕೆ ಕರೀನಾ ಕಪೂರ್ ಖಾನ್ ಸೂಟ್ ಆಗುವುದಿಲ್ಲ. ಕರೀನಾ ಕಪೂರ್‌ಗೆ ಈಗ ವಯಸ್ಸಾಗಿದೆ. ಹೀಗಾಗಿ, ಅವರಿಂದ ಸೀತಾ ಮಾತೆಯ ಮುಗ್ಧ ನೋಟ ನಿರೀಕ್ಷಿಸಲು ಸಾಧ್ಯವಿಲ್ಲ'' ಎಂದು ನೆಟ್ಟಿಗರೊಬ್ಬರು ಟ್ವೀಟಿಸಿದ್ದಾರೆ. ಅಷ್ಟೇ ಅಲ್ಲದೆ, ''ಬೇರೆ ಯಾರೂ ಪ್ರತಿಭಾವಂತ ಕಲಾವಿದೆಯರು ಇಲ್ಲವೇ?'' ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.