ಹಾಸನ/ಚನ್ನರಾಯಪಟ್ಟಣ :ಚಾಲಕನ ನಿಯಂತ್ರಣ ತಪ್ಪಿ ಬೋರ್‌ವೆಲ್ ಲಾರಿಯೊಂದು ಮನೆಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ನುಗ್ಗೆಹಳ್ಳಿ ಸಮೀಪದ ಮುಳ್ಳಕೆರೆ ಗ್ರಾಮದಲ್ಲಿ ನಡೆದಿದೆ.
ರಾಜುವೇಲ್ (42) ಮೃತ ಚಾಲಕ. ತಮಿಳುನಾಡು ಮೂಲದ ಈತ ಹಲವು ವರ್ಷಗಳಿಂದ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಬೋರ್‌ವೆಲ್ ಕೊರೆಯುವ ವಾಹನದ ಚಾಲಕನಾಗಿದ್ದ. ಜಿಲ್ಲೆಯ ನುಗ್ಗೆಹಳ್ಳಿ ಸಮೀಪದ ಮುಳ್ಳಕೆರೆ ಗ್ರಾಮದಲ್ಲಿ ಬೋರ್‌ವೆಲ್ ಕೊರೆಯಲು ಬೇಕಾಗುವ ಸಾಮಗ್ರಿಗಳನ್ನು ಹೊತ್ತೂಯ್ಯುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.