ಗೌರಿಗಂಜ್(ಯು.ಪಿ): ದೇಶದ ಏಳು ರಾಜ್ಯಗಳಲ್ಲಿ ಐದನೇ ಹಂತದ ಮತದಾನ ಪ್ರಗತಿಯಲ್ಲಿದ್ದು, ಇದರ ನಡುವೆಯೇ ಉತ್ತರ ಪ್ರದೇಶದಲ್ಲಿ ಮತಗಟ್ಟೆಯ ಅಧಿಕಾರಿ ಬಲವಂತವಾಗಿ ವೃದ್ಧೆಯ ಬಳಿ ಮತ ಹಾಕಿಸಿದ್ದಾರೆ ಎನ್ನಲಾಗುತ್ತಿದೆ.
ವೃದ್ಧೆಯಿಂದ ಬಲವಂತವಾಗಿ ಕಾಂಗ್ರೆಸ್ಗೆ ವೋಟ್ ಹಾಕಿಸಿದ ಅಧಿಕಾರಿ... ಸ್ಮೃತಿ ಇರಾನಿ ಕಿಡಿ - ಸ್ಮೃತಿ ಇರಾನಿ
ವೃದ್ಧೆ ವಿಡಿಯೋದಲ್ಲಿ ಹೇಳಿಕೊಂಡಂತೆ ಆಕೆ ಬಿಜೆಪಿ ಮತ ಚಲಾಯಿಸಲು ಮುಂದಾಗಿದ್ದಳಂತೆ. ಆದರೆ ಅಲ್ಲಿನ ಹಾಜರಿದ್ದ ಅಧಿಕಾರಿ ಬಲವಂತವಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿಸಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದಾಳೆ.
ವೃದ್ಧೆ ವಿಡಿಯೋದಲ್ಲಿ ಹೇಳಿಕೊಂಡಂತೆ ಆಕೆ ಬಿಜೆಪಿ ಮತ ಚಲಾಯಿಸಲು ಮುಂದಾಗಿದ್ದರಂತೆ. ಆದರೆ ಅಲ್ಲಿನ ಹಾಜರಿದ್ದ ಅಧಿಕಾರಿ ಬಲವಂತವಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಉತ್ತರ ಪ್ರದೇಶದ ಗೌರಿಗಂಜ್ನ ಗೂಜರ್ಟೋಲಾದ 316ನೇ ಬೂತ್ನಲ್ಲಿ ಈ ಘಟನೆ ನಡೆದಿದೆ. ವೃದ್ಧೆ ತನಗಾದ ಅನ್ಯಾಯವನ್ನು ಕ್ಯಾಮೆರಾ ಮುಂದೆ ಹೇಳಿಕೊಂಡಿದ್ದು ಸದ್ಯ ಇದು ವೈರಲ್ ಆಗಿದೆ.
ಅಮೇಠಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಈ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಾಹುಲ್ ಗಾಂಧಿ ಪರೋಕ್ಷವಾಗಿ ಕಳ್ಳಾಟ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.