ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಉತ್ತಮೇಶ್ವರ ಸಮೀಪದ ಅಗ್ರವಳ್ಳಿಯ ಲಕ್ಷ್ಮಣ ಎಂಬುವವರು ಕಳೆದ ಮೂರು ವರ್ಷದಿಂದ ಹೃದಯ ಹಾಗೂ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದು, ಆಮ್ಲಜನಕಕ್ಕಾಗಿ ಆಕ್ಸಿಜನ್ ಕಾನ್ಸಂಟ್ರೇಟರ್ ಬಳಸುತ್ತಿದ್ದರು.
ಆಮ್ಲಜನಕ ಸಾಂದ್ರಕ ನೀಡಿ ರೋಗಿಯ ಜೀವ ಕಾಪಾಡಿದ 'ಬ್ಲೂ ಯೆಂಡರ್' - ಚಿಕ್ಕಮಗಳೂರು ಬ್ಲೂ ಯೆಂಡರ್'
ಕೊಪ್ಪ ತಾಲೂಕಿನ ಉತ್ತಮೇಶ್ವರ ಸಮೀಪದ ಅಗ್ರವಳ್ಳಿಯ ಲಕ್ಷ್ಮಣ ಎಂಬವರಿಗೆ ಬ್ಲೂ ಯೆಂಡರ್ ಕಂಪನಿ ಉಚಿತವಾಗಿ ಆಮ್ಲಜನಕ ಸಾಂದ್ರಕ ಯಂತ್ರ ನೀಡುವ ಮೂಲಕ ಮಾನವೀಯತೆ ಮೆರೆದಿದೆ.
ಆದರೆ ಆರ್ಥಿಕ ಸಂಕಷ್ಟದ ಕಾರಣ ಬಾಡಿಗೆ ಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಇದನ್ನು ಗಮನಿಸಿದ ಬ್ಲೂ ಯೆಂಡರ್ ಎಂಬ ಕಂಪನಿ ರೋಗಿಗೆ ಉಚಿತವಾಗಿ ಆಮ್ಲಜನಕ ಸಾಂದ್ರಕ ಯಂತ್ರ ನೀಡುವ ಮೂಲಕ ಮಾನವೀಯತೆ ಮೆರೆದಿದೆ.
ಮಣಿಪಾಲದ ವೈದ್ಯರ ಶಿಫಾರಸ್ಸಿನಂತೆ ಇವರು ನಿತ್ಯ 18 ಗಂಟೆಗಳ ಕಾಲ ಆಮ್ಲಜನಕ ಪಡೆಯಬೇಕಿತ್ತು. ರೋಗಿಯು ಖಾಸಗಿ ಕಂಪನಿಯಿಂದ ತಿಂಗಳಿಗೆ 5 ಸಾವಿರದಂತೆ ಬಾಡಿಗೆಗೆ ಆಕ್ಸಿಜನ್ ಕಾನ್ಸಂಟ್ರೇಟರ್ ಪಡೆದಿದ್ದರು. ಬಾಡಿಗೆ ನೀಡದ ಕಾರಣ ಮನೆಯಲ್ಲಿ ಅಳವಡಿಸಿದ್ದ ಅಮ್ಲಜನಕ ಸಾಂದ್ರಕವನ್ನು ದಿಢೀರ್ ವಾಪಸ್ಸು ಕೊಂಡೊಯ್ದ ಕಾರಣ ರೋಗಿಯ ಆರೋಗ್ಯ ಸ್ಥಿತಿ ಚಿಂತಾಜನಕವಾಗಿತ್ತು. ಇದನ್ನು ತಿಳಿದ ಬೆಂಗಳೂರಿನ ಬ್ಲೂ ಯೆಂಡರ್ ಕಂಪನಿ ರೋಗಿಯ ನೆರವಿಗೆ ಧಾವಿಸಿ ಸಹಾಯ ಮಾಡಿದೆ.